– ಬೆಡ್ರೂಂನಲ್ಲಿ ಪ್ರೈವೆಟ್ ವೀಡಿಯೋ ಶೂಟ್ ಮಾಡಿದ್ದ ಎಂದು ಆರೋಪಿಸಿದ್ದ ಪತ್ನಿ
ಬೆಂಗಳೂರು: ಬೆಡ್ರೂಂನಲ್ಲಿ (Bedroom) ಖಾಸಗಿ ವೀಡಿಯೋ ಶೂಟ್ ಮಾಡಿದ್ದ ಎಂದು ಆರೋಪಿಸಿದ್ದ ಪತ್ನಿಯ (Wife) ಆರೋಪವನ್ನು ಪತಿ (Husband) ಹೀನಾಮುಲ ಹಕ್ ತಳ್ಳಿಹಾಕಿದ್ದಾರೆ.
ನನ್ನ ಗಂಡ 21 ಮದುವೆಯಾಗಿದ್ದಾನೆ, ನನ್ನ ಪ್ರೈವೆಟ್ ವೀಡಿಯೋ ಶೂಟ್ ಮಾಡಿದ್ದಾನೆ ಎಂದೆಲ್ಲಾ ಆರೋಪಿಸಿ ಪತ್ನಿ ಪತಿ ಹೀನಾಮುಲ ಹಕ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಈ ಬೆನ್ನಲ್ಲೇ ವೀಡಿಯೋ ಮೂಲಕ ಪತಿ ಹೀನಾಮುಲ ಹಕ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪತಿಯಿಂದ್ಲೇ ಬೆಡ್ರೂಂನಲ್ಲಿನ ಖಾಸಗಿ ಕ್ಷಣಗಳ ವಿಡಿಯೋ ಸೆರೆ – ವಿದೇಶಿ ಸ್ನೇಹಿತರೊಂದಿಗೆ ಮಲಗುವಂತೆ ಒತ್ತಾಯಿಸಿ ಪತ್ನಿಗೆ ಬ್ಲ್ಯಾಕ್ಮೇಲ್
ಮದುವೆಗೆ ಮುಂಚೆ ಆಕೆಯ ಜೊತೆ ಸಂಬಂಧ ಹೊಂದಿದ್ದು ನಿಜ. ಆದರೆ ಆಕೆಯೇ ನನ್ನನ್ನು ಒತ್ತಾಯ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಳು ಎಂದು ಆರೋಪಿಸಿದ್ದಾರೆ. ನನಗೆ ಸಾಕಷ್ಟು ಟಾರ್ಚರ್ ಕೊಡುತ್ತಿದ್ದಳು. ನಾನು 21 ಮದುವೆಯಾಗಿಲ್ಲ, ನನಗೆ ಆಗಿರುವುದು ಒಂದೇ ಮದುವೆ. ನನ್ನ ಬಳಿಯೇ ಅವರು 17 ಲಕ್ಷ ಹಣ ವಸೂಲಿ ಮಾಡಿದ್ದಾರೆ. ನನ್ನ ಪತ್ನಿಗೆ 13 ಲಕ್ಷದ ಒಡವೆ ನಾನೇ ಕೊಡಿಸಿದ್ದೇನೆ. ನಾನು 21 ಮದುವೆ ಆಗಿದ್ದೆ ಆದರೆ ಆಕೆ ಯಾಕೆ ನನ್ನನ್ನು ಮದುವೆಯಾದಳು? ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಸೋಮಣ್ಣ ಮನೆಯಲ್ಲಿ ಜಾತಿಗಣತಿಗೆ 9 ಸಿಬ್ಬಂದಿ – ಸರ್ವೇಗೆ ಇಷ್ಟು ಜನ ಯಾಕೆ ಬಂದ್ರಿ ಅಂತ ಕ್ಲಾಸ್