ರಾಮನಗರ: ಲೋಕಾಯುಕ್ತ ಡಿವೈಎಸ್ಪಿ (Lokayukta DySP) ಹೆಸರಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣಕ್ಕೆ (Money) ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ರಾಮನಗರದ (Ramanagara) ಐಜೂರು ಪೊಲೀಸರು (Ijoor Police) ಬಂಧಿಸಿದ್ದಾರೆ.
ಮುರೇಗಪ್ಪ ಬಂಧಿತ ಆರೋಪಿ. ಮಾಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಕರೆ ಮಾಡಿದ್ದ ಮುರೇಗಪ್ಪ ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಈ ಸಂಬಂಧ ಸಿಡಿಪಿಒ ಅಧಿಕಾರಿ ಸುರೇಂದ್ರ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಐಜೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮಹಾರಾಷ್ಟçದ ಕೊಲ್ಲಾಪುರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್ ನೀಡದ ಸಚಿವ ನಖ್ವಿಗೆ ಪಾಕ್ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ
ಆರೋಪಿ ಮುರೇಗಪ್ಪ ಮೇಲೆ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಯಿಂದ 3 ಮೊಬೈಲ್ ಹಾಗೂ 9ಕ್ಕೂ ಹೆಚ್ಚು ಸಿಮ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೇ ಅಲ್ಲದೇ ಮುರೇಗಪ್ಪ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಲೋಕಾಯಕ್ತ ಅಧಿಕಾರಿ ಎಂದು ಬೆದರಿಕೆ ಹಾಕಿ ಹಣ ಪೀಕಿದ್ದ. ಮುರೇಗಪ್ಪ ಎಂಟು ವರ್ಷಗಳ ಕಾಲ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸಿದ್ದ. ಎರಡು ವರ್ಷ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸಿ, ಸಸ್ಪೆಂಡ್ ಆಗಿದ್ದ. ಬಳಿಕ ಬೆದರಿಕೆ ಹಾಕಿ ಹಣ ಪೀಕುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿದ ಐಜೂರು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಕೇಸ್ – 2 ತಿಂಗಳು ಕಳೆದರೂ 12 ಆರೋಪಿಗಳಿಗೆ ಬಿಡುಗಡೆ ಭಾಗ್ಯವಿಲ್ಲ