– ಗ್ಯಾಸ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ
ವಾಷಿಂಗ್ಟನ್: ಅಮೆರಿಕದ (America) ಡಲ್ಲಾಸ್ನಲ್ಲಿ ಭಾರತ ಮೂಲದ (India) ದಂತ ವೈದ್ಯನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹೈದರಾಬಾದ್ (Hyderabad) ಮೂಲದ ಚಂದ್ರಶೇಖರ್ ಪೋಲ್ ಹತ್ಯೆಗೀಡಾದ ದುರ್ದೈವಿ.
ಗುರುವಾರ ರಾತ್ರಿ ಚಂದ್ರಶೇಖರ್ ಅವರು ಗ್ಯಾಸ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಅವರು 2023ರಲ್ಲಿ ಹೈದರಾಬಾದ್ನಲ್ಲಿ ದಂತ ಶಸ್ತ್ರಚಿಕಿತ್ಸೆ ಪದವಿ ಮುಗಿಸಿ, ನಂತರ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಆರು ತಿಂಗಳ ಹಿಂದೆ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಇದರ ನಡುವೆ ಅವರು, ಪೆಟ್ರೋಲ್ ಬಂಕ್ನಲ್ಲಿ ಪಾರ್ಟ್ಟೈಮ್ ಕೆಲಸ ಮಾಡುತ್ತಾ ಉದ್ಯೋಗದ ಹುಡುಕಾಟದಲ್ಲಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟ್ರಂಪ್ ಮಾತಿಗೆ ಇಸ್ರೇಲ್ ಡೋಂಟ್ ಕೇರ್ – ಗಾಜಾ ಮೇಲೆ ಮತ್ತೆ ವೈಮಾನಿಕ ದಾಳಿ, 6 ಮಂದಿ ಸಾವು
ಬಿಆರ್ಎಸ್ ಶಾಸಕ ಸುಧೀರ್ ರೆಡ್ಡಿ ಮತ್ತು ಮಾಜಿ ಸಚಿವ ಟಿ ಹರೀಶ್ ರಾವ್ ಹೈದರಾಬಾದ್ನಲ್ಲಿರುವ ಮೃತನ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯನ್ನು ʻದುರಂತʼ ಘಟನೆ ಎಂದು ಸುಧೀರ್ ರೆಡ್ಡಿಯವರು ಕರೆದಿದ್ದಾರೆ. ಇದೇ ವೇಳೆ ಮೃತದೇಹವನ್ನು ಅವರ ಊರಿಗೆ ತರಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮೃತರ ಕುಟುಂಬಸ್ಥರು ಮೃತದೇಹವನ್ನು ಅಮೆರಿಕದಿಂದ ಹೈದರಾಬಾದ್ಗೆ ತರಲು ಸರ್ಕಾರದ ಸಹಾಯ ಕೋರಿದ್ದಾರೆ. ಇದನ್ನೂ ಓದಿ: ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ