ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದ ರಕ್ಷಿತ್‌ ಶೆಟ್ಟಿಗೆ ರಿಷಬ್‌ ವಿಶ್‌ – ಥ್ಯಾಂಕ್ಸ್‌ ಮಗ ಎಂದ ಚಾರ್ಲಿ ಹೀರೋ

Public TV
1 Min Read

– ಕಾಂತಾರ ಚಾಪ್ಟರ್‌ 1 ಸಕ್ಸಸ್‌ಗೆ ಗೆಳೆಯನಿಗೆ ಶುಭಾಶಯ ತಿಳಿಸಿದ ರಕ್ಷಿತ್‌ ಶೆಟ್ಟಿ

‘777 ಚಾರ್ಲಿ’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ಭಾಜನರಾದ ರಕ್ಷಿತ್‌ ಶೆಟ್ಟಿಗೆ (Rakshit Shetty) ಕಾಂತಾರ ಹೀರೋ ರಿಷಬ್‌ ಶೆಟ್ಟಿ ವಿಶ್‌ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಆಪ್ತ ಗೆಳೆಯನಿಗೆ ರಕ್ಷಿತ್‌ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.

2021ನೇ ಸಾಲಿನ ಕನ್ನಡ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 2025ರಲ್ಲಿ ಪ್ರಕಟಿಸಲಾಯಿತು. ರಕ್ಷಿತ್‌ ಶೆಟ್ಟಿಗೆ ಅತ್ಯುತ್ತಮ ನಟ ಸೇರಿದಂತೆ 777 ಚಾರ್ಲಿ ಸಿನಿಮಾಗೆ ಒಟ್ಟು ನಾಲ್ಕು ಪ್ರಶಸ್ತಿಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಎಕ್ಸ್‌ ಪೋಸ್ಟ್‌ ಮೂಲಕ ರಿಷಬ್‌ ಶೆಟ್ಟಿ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ‘777 ಚಾರ್ಲಿ’ ಸಿನಿಮಾಗೆ ನಾಲ್ಕು ರಾಜ್ಯ ಪ್ರಶಸ್ತಿ – ಧನ್ಯವಾದ ಎಂದ ಅತ್ಯುತ್ತಮ ನಟ ರಕ್ಷಿತ್‌ ಶೆಟ್ಟಿ

ಅತ್ಯುತ್ತಮ ನಟನಿಗೆ (ರಕ್ಷಿತ್‌ ಶೆಟ್ಟಿ) ರಾಜ್ಯ ಸರ್ಕಾರದಿಂದ ಗೌರವ. ಅಭಿನಂದನೆಗಳು ಮಗ. ರಾಜ್ಯ ಪ್ರಶಸ್ತಿ ಪಡೆದ ಎಲ್ಲಾ ವಿಜೇತರಿಗೂ ನನ್ನ ಶುಭಾಶಯಗಳು ಎಂದು ರಿಷಬ್‌ ಶೆಟ್ಟಿ (Rishab Shetty) ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ರಕ್ಷಿತ್‌ ಶೆಟ್ಟಿ, ಧನ್ಯವಾದಗಳು ಮಗ ಎಂದಿದ್ದಾರೆ. ಅಲ್ಲದೇ, ಕಾಂತಾರ ಚಾಪ್ಟರ್‌ 1ರ ಅದ್ಭುತ ಯಶಸ್ಸಿಗೆ ಅಭಿನಂದನೆಗಳನ್ನು ಸಹ ತಿಳಿಸಿದ್ದಾರೆ.

ಅ.2 ರಂದು ಕಾಂತಾರ ಚಾಪ್ಟರ್‌ 1 (Kantara Chapter 1) ದೇಶ-ವಿದೇಶಗಳಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿ ಹಲವು ದಾಖಲೆಗಳನ್ನು ಉಡೀಸ್‌ ಮಾಡಿದೆ. ಕೇವಲ ಎರಡೇ ದಿನದಲ್ಲಿ 100 ಕೋಟಿ ರೂ. ಕ್ಲಬ್‌ ಸೇರಿದೆ. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾ ಧೂಳೆಬ್ಬಿಸಿದೆ. ಇದನ್ನೂ ಓದಿ: 2021ನೇ ಸಾಲಿನ ಪ್ರಶಸ್ತಿ ಘೋಷಣೆ – ಚಾರ್ಲಿ 777 ಚಿತ್ರದ ನಟನೆಗೆ ರಕ್ಷಿತ್ ಶೆಟ್ಟಿಗೆ ಪ್ರಶಸ್ತಿ

Share This Article