ಅಂಕಲಗಿ ದುರ್ಗಾದೇವಿ ಜಾತ್ರೆಯಲ್ಲಿ ಗಲಾಟೆ ವೇಳೆ ಏರ್‌ಫೈರ್ – ಎರಡು ಗುಂಪುಗಳ 14 ಮಂದಿ ಅರೆಸ್ಟ್

Public TV
1 Min Read

-ಬಾಲಕಿ ಕಾಲಿಗೆ ತಗುಲಿದ್ದ ಗುಂಡು

ವಿಜಯಪುರ: ಅಂಕಲಗಿ ದುರ್ಗಾದೇವಿ ಜಾತ್ರೆಯಲ್ಲಿ ನಡೆದ ಗಲಾಟೆ ವೇಳೆ ಏರ್‌ಫೈರ್ ಮಾಡಿದ್ದಕ್ಕೆ ಎರಡು ಗುಂಪುಗಳ 14 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಅಂಕಲಗಿ ದುರ್ಗಾದೇವಿ ಜಾತ್ರೆ ವೇಳೆ ವಡ್ಡರ್ ಹಾಗೂ ಪೂಜಾರಿ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ರಾಮ ಅಂಕಲಗಿ ಎಂಬಾತ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಇದರಿಂದ ಬಾಲಕಿಯ ಕಾಲಿಗೆ ಗುಂಡು ತಗುಲಿತ್ತು. ಈ ಘಟನೆಯನ್ನು ಜಿಲ್ಲಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.ಇದನ್ನೂ ಓದಿ: ಬೆಂಗ್ಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಥಿಪಂಜರ ಪತ್ತೆ – 6 ತಿಂಗಳ ಹಿಂದೆ ಮೃತಪಟ್ಟ ಶಂಕೆ

ಈ ಸಂಬಂಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ 14 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಎರಡು ಗುಂಪುಗಳ 14 ಜನರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ (SP Laxman Nimbaragi) ಮಾಹಿತಿ ನೀಡಿದ್ದಾರೆ.

Share This Article