ರಾಹುಲ್‌, ಜುರೆಲ್‌, ಜಡೇಜಾ ಶತಕ – 286 ರನ್‌ಗಳ ಮುನ್ನಡೆ, ಬೃಹತ್‌ ಮೊತ್ತದತ್ತ ಭಾರತ

Public TV
1 Min Read

ಅಹಮದಾಬಾದ್‌: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ (IND vs WI Test Match) ಮೂರು ಶತಕಗಳ ನೆರವಿನಿಂದ ಭಾರತ (Team India) 286 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

ಮೊದಲ ದಿನ 2 ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿಸಿದ್ದ ಭಾರತ ಇಂದು 327 ರನ್‌ ಕಲೆ ಹಾಕಿದೆ. ದಿನದ ಅಂತ್ಯಕ್ಕೆ 128 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 448 ರನ್‌ ಗಳಿಸಿದೆ. ಇದನ್ನೂ ಓದಿ: ಸಿರಾಜ್‌, ಬುಮ್ರಾ ಬೌಲಿಂಗ್‌ಗೆ ವಿಂಡೀಸ್‌ ತತ್ತರ – ಮೊದಲ ದಿನ ಭಾರತಕ್ಕೆ ಮೇಲುಗೈ

ಗುರುವಾರ 18 ರನ್‌ಗಳಿಸಿದ್ದ ನಾಯಕ ಶುಭಮನ್‌ ಗಿಲ್‌ ಇಂದು (50) ರನ್‌ ಹೊಡೆದರೆ ಕೆಎಲ್‌ ರಾಹುಲ್‌ 197 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ ಶತಕ ಸಿಡಿಸಿ ಔಟಾದರು.

ಧ್ರುವ್ ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್‌ ಸಿಡಿಸಿ 125 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಧ್ರುವ್ ಜುರೆಲ್ ಮತ್ತು ಜಡೇಜಾ 5ನೇ ವಿಕೆಟಿಗೆ 331 ಎಸೆತಗಳಲ್ಲಿ 206 ರನ್‌ ಜೊತೆಯಾಟವಾಡಿದ್ದರಿಂದ ಭಾರತ ಬೃಹತ್‌ ಮುನ್ನಡೆ ಸಾಧಿಸಿದೆ.

ರವೀಂದ್ರ ಜಡೇಜಾ ಔಟಾಗದೇ 104 ರನ್‌(176 ಎಸೆತ, 6 ಬೌಂಡರಿ, 5 ಸಿಕ್ಸ್‌) ಸಿಡಿಸಿದರೆ ವಾಷಿಂಗ್ಟನ್‌ ಸುಂದರ್‌ 9 ರನ್‌ಗಳಿಸಿ ಅಜೇಯರಾಗಿ ಉಳಿದರು. ಮೂರು ದಿನಗಳು ಪಂದ್ಯ ಬಾಕಿ ಇದ್ದು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಕಲೆ ಹಾಕುವ ಸಾಧ್ಯತೆ ಇದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ್ದ ವೆಸ್ಟ್ ಇಂಡೀಸ್ 162 ರನ್ ಗಳಿಸಿ ಮೊದಲ ದಿನವೇ ಆಲೌಟ್ ಆಗಿತ್ತು. ಇದನ್ನೂ ಓದಿ: 1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್‌ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್‌ ಶರ್ಮಾ ವಿಶ್ವದಾಖಲೆ

Share This Article