ಹಾಸನ | ಅಡುಗೆ ವಿಚಾರಕ್ಕೆ ಕಿರಿಕ್‌ – ಕಂಠಪೂರ್ತಿ ಕುಡಿದು ತಾಯಿಯನ್ನೇ ಕೊಂದ ಮಗ

Public TV
1 Min Read

ಹಾಸನ: ಅಡುಗೆ ಮಾಡದ ವಿಚಾರಕ್ಕೆ ತಾಯಿ-ಮಗನ ನಡುವೆ ನಡೆದ ಜಗಳ ತಾರಕಕ್ಕೇರಿ ತಾಯಿಯ (Mother) ಕೊಲೆಯಲ್ಲಿ (Murder) ಅಂತ್ಯವಾಗಿರುವುದು ಆಲೂರಿನ (Alur) ಕದಾಳುಚನ್ನಾಪುರ ಗ್ರಾಮದಲ್ಲಿ ನಡೆದಿದೆ.

ಪ್ರೇಮ (45) ಮಗನಿಂದಲೇ ಕೊಲೆಯಾದ ದುರ್ದೈವಿ. ಸಂತೋಷ್‌ (19) ಹೆತ್ತ ತಾಯಿಯನ್ನೇ ಕೊಲೆಗೈದ ಆರೋಪಿಯಾಗಿದ್ದಾನೆ. ಈತ ಗುರುವಾರ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. ಈ ವೇಳೆ ತಾಯಿ ಅಡುಗೆ ಮಾಡದಿದ್ದಕ್ಕೆ ಜಗಳ ತೆಗೆದು, ಮಾತಿಗೆ ಮಾತು ಬೆಳೆದು ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದಿದ್ದ. ಇದನ್ನೂ ಓದಿ: ಪತಿಯಿಂದ್ಲೇ ಬೆಡ್‌ರೂಂನಲ್ಲಿನ ಖಾಸಗಿ ಕ್ಷಣಗಳ ವಿಡಿಯೋ ಸೆರೆ – ವಿದೇಶಿ ಸ್ನೇಹಿತರೊಂದಿಗೆ ಮಲಗುವಂತೆ ಒತ್ತಾಯಿಸಿ ಪತ್ನಿಗೆ ಬ್ಲ್ಯಾಕ್‌ಮೇಲ್

ತೀವ್ರವಾಗಿ ಗಾಯಗೊಂಡಿದ್ದ ಪ್ರೇಮರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸ್ವಾಮಿ ಚೈತನ್ಯಾನಂದಗೆ ಸಹಕರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಡ – ಮೂವರು ಸಹಾಯಕಿಯರು ಅರೆಸ್ಟ್‌

Share This Article