ದಾವಣಗೆರೆ | ದೇವಸ್ಥಾನದ ಮುಂದೆ ತಲ್ವಾರ್‌ ಹಿಡಿದು ಓಡಾಡಿದ ಅನ್ಯಕೋಮಿನ ಯುವಕ – ವೀಡಿಯೋ ವೈರಲ್

Public TV
1 Min Read

ದಾವಣಗೆರೆ: ನಗರದ (Davanagere) ದೇವಸ್ಥಾನವೊಂದರ ಮುಂದೆ ಅನ್ಯಕೋಮಿನ ಯುವಕನೊಬ್ಬ ತಲ್ವಾರ್ ಹಿಡಿದು ಓಡಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದಾವಣಗೆರೆಯ ಮಟ್ಟಿಕಲ್‌ನಲ್ಲಿರುವ ಬಸವೇಶ್ವರ ದೇವಸ್ಥಾನದ (Temple) ಮುಂಭಾಗದ ರಸ್ತೆಯಲ್ಲಿ ಯುವಕ ತಲ್ವಾರ್‌ ಹಿಡಿದು ಓಡಾಡಿದ್ದಾನೆ. ಇದನ್ನು ಸಾರ್ವಜನಿಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋ ಆಧರಿಸಿ ಆರ್‌ಎಂಸಿ ಠಾಣೆ ಪೊಲೀಸರು ಸುಮೋಟೋ ಕೇಸ್‌ ದಾಖಲಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆ – 8 ಮಂದಿ ಅರೆಸ್ಟ್

ಯುವಕ ಯಾವ ಕಾರಣಕ್ಕೆ ತಲ್ವಾರ್‌ ಹಿಡಿದು ಓಡಾಡಿದ್ದಾನೆ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇಸ್ ದಾಖಲಾದರೂ ತಲ್ವಾರ್ ಹಿಡಿದು ಓಡಾಡಿದ ವ್ಯಕ್ತಿಯನ್ನು ಬಂಧಿಸಿಲ್ಲ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಆತನನ್ನು ಬಂಧಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹಿಂದೂ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ‘ಐ ಲವ್ ಮಹಮ್ಮದೀಯ’ ಎಂಬ ಫ್ಲೆಕ್ಸ್ ಹಾಕಿದ್ದಕ್ಕೆ ಗಲಾಟೆ – ಮನೆಗಳನ್ನು ಟಾರ್ಗೆಟ್‌ ಮಾಡಿ ಕಲ್ಲು ತೂರಾಟ

Share This Article