ಡಬಲ್‌ ಸಂಭ್ರಮ – ಅಗತ್ಯ ವಸ್ತುಗಳ ಜಿಎಸ್‌ಟಿ ಇಳಿಕೆ| ಹಿಂದೆ ಎಷ್ಟು ದರ? ಈಗ ಎಷ್ಟು ಇಳಿಕೆ?

Public TV
4 Min Read

ಬೆಂಗಳೂರು: ಜನ ಸಾಮಾನ್ಯನಿಗೆ ನಾಳೆಯಿಂದ ಡಬ್ಬಲ್ ಸಂಭ್ರಮ. ದಸರಾ (Dasara) ಜೊತೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ.

ಶಾಂಪೂ, ಪೇಸ್ಟ್ ನಿಂದ ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್‌ವರೆಗೂ ಜಿಎಸ್‌ಟಿ ಸ್ಲ್ಯಾಬ್ (GST Slab) ಪರಿಷ್ಕರಣೆಯಾಗಿದೆ. ಪರಿಣಾಮ ಕೆಲ ವಸ್ತುಗಳ ಮೇಲಿದ್ದ ತೆರಿಗೆ 12%ನಿಂದ 5% ಹೋದರೆ ಕೆಲ ದುಬಾರಿ ವಸ್ತುಗಳ ಬೆಲೆ 28% ನಿಂದ 18% ಇಳಿಕೆಯಾಗಿದೆ.

ಸೆ.22 ರಿಂದ ಇಳಿಕೆ ಯಾಕೆ?
ಸೆಪ್ಟೆಂಬರ್‌ ಮೊದಲ ವಾರದಲ್ಲಿ ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಪರಿಷ್ಕರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದವು.

2017ರಲ್ಲಿ ಜಾರಿಯಾದ ಜಿಎಸ್‌ಟಿಯಲ್ಲಿ 0, 5%, 12%, 18%, 28% ಅಡಿಯಲ್ಲಿ ವಸ್ತುಗಳ ಮೇಲೆ ತೆರಿಗೆ ಹಾಕಲಾಗುತ್ತಿತ್ತು. ಆದರೆ ಈಗ 12% ಮತ್ತು 28% ಸ್ಲ್ಯಾಬ್‌ ಅನ್ನು ತೆಗೆಯಲಾಗಿದ್ದು ಈ ಪಟ್ಟಿಯಲ್ಲಿದ್ದ ಬಹುತೇಕ ವಸ್ತುಗಳನ್ನು 5% ಮತ್ತು 18% ಶಿಫ್ಟ್‌ ಮಾಡಲಾಗಿದೆ. ಇದರ ಜೊತೆ ಐಷಾರಾಮಿ ವಸ್ತುಗಳು (ತಂಬಾಕು, ಐಷಾರಾಮಿ ಕಾರುಗಳು ಇತ್ಯಾದಿ) ಮೇಲೆ 40% ತೆರಿಗೆ ಹಾಕಲಾಗುತ್ತದೆ.

ತೆರಿಗೆ ಪರಿಷ್ಕರಣೆಯಾದ ದರಗಳು ಸೆ.22 ರಿಂದ ಜಾರಿಗೆ ಬರಬೇಕು ಎಂಬ ನಿರ್ಧಾರವನ್ನು ಜಿಎಸ್‌ಟಿ ಕೌನ್ಸಿಲ್‌ ತೆಗೆದುಕೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶಾದ್ಯಂತ 99% ರಷ್ಟು ವಸ್ತುಗಳ ಬೆಲೆ ಇಳಿಕೆಯಾಗಲಿದೆ.

ವಸ್ತುಗಳು – ಹಳೆದರ – ಹೊಸದರ – ಉಳಿತಾಯ
– ಟೂತ್‌ಪೇಸ್ಟ್(150 ಗ್ರಾಂ) – 145 – 129 – 24
– ಶಾಂಪೂ (340 ಎಂಎಲ್) – 490 – 435 – 55
– ಲೈಫ್ ಬಾಯ್ ಸೋಪ್(75ಗ್ರಾಂ) – 68 – 60 – 8
– ಲಕ್ಸ್ ಸೋಪ್(75ಗ್ರಾಂ) – 96 – 85 – 11
ಲ್ಯಾಕ್ ಮೀ ಕಾಂಪ್ಯಾಕ್ಟ್ – 675 – 599 – 76  ಇದನ್ನೂ ಓದಿ: ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ; ಯಾವುದಕ್ಕೆ ಎಷ್ಟು ದರ? ಇಲ್ಲಿದೆ ಪಟ್ಟಿ

– ಹಾರ್ಲಿಕ್ಸ್ (200 ಗ್ರಾಂ) – 130 -110 – 20
ಬೂಸ್ಟ್ (200 ಗ್ರಾಂ) – 124 -110 -14
– ಕಿಸಾನ್ ಕೆಚಪ್ (850 ಗ್ರಾಂ) – 100 – 93 – 7
– ಬ್ರೂ ಕಾಫಿ (75 ಗ್ರಾಂ) – 300 – 270 – 30

– ಹಾರ್ಲಿಕ್ಸ್ ಉಮೆನ್(400ಗ್ರಾಂ) – 320 -284 – 36
– ನೆಸ್ಕೆಫೆ (45ಗ್ರಾಂ) – 265 – 235 – 30
– ನೆಸ್ಕೆಫೆ ಗೋಲ್ಡ್(100 ಗ್ರಾಂ) – 850 – 755 – 95
– ಸೆರ್ಲ್ಯಾಕ್ (350ಗ್ರಾಂ) – 295 – 265 – 30

ಹಾಲಿನ ಉತ್ಪನ್ನಗಳು (ಕೆಎಂಎಫ್‌) ಎಷ್ಟು ಇಳಿಕೆ?
ವಸ್ತುಗಳು – ಹಳೆದರ – ಹೊಸದರ – ಉಳಿತಾಯ

– ತುಪ್ಪ (1000 ಎಂಲ್) – 650 – 610 – 40
– ಬೆಣ್ಣೆ (500 ಗ್ರಾಂ) – 305 – 286 – 19
– ಪನೀರ್ (1 ಕೆಜಿ) – 425 – 408 – 17

– ಗುಡ್ ಲೈಫ್‌(1 ಲೀಟರ್) – 70 – 68- 2
– ಚೀಸ್ (1 ಕೆ.ಜಿ) – 480 – 450 – 30
– ಚೀಸ್ ಸಂಸ್ಕರಣೆ (1ಕೆ.ಜಿ) – 530 – 497 – 33
– ಐಸ್ ಕ್ರೀಂ (1000 ಎಂಎಲ್) – 200 – 178 – 22  ಇದನ್ನೂ ಓದಿ:  ಜಿಎಸ್‌ಟಿ ಪರಿಷ್ಕರಣೆ ಬೆನ್ನಲ್ಲೇ ದುಬಾರಿಯಾಗಲಿದೆ ಆರ್‌ಸಿಬಿ ಟಿಕೆಟ್‌ ದರ

ಅಮುಲ್ ಉತ್ಪನ್ನಗಳು ದರ ಎಷ್ಟು ಇಳಿಕೆ?
ವಸ್ತುಗಳು – ಹಳೆದರ – ಹೊಸದರ – ಉಳಿತಾಯ

– ಅಮುಲ್ ಬೆಣ್ಣೆ (500 ಗ್ರಾಂ) – 305 ರೂ – 285 -20.
– ಅಮುಲ್ ತಾಜಾ ಟೋನ್ಡ್ ಮಿಲ್ಕ್ (1 ಲೀಟರ್ ಯುಹೆಚ್‌ಟಿ) – 77 – 75 – 2
– ಅಮುಲ್ ಗೋಲ್ಡ್ (1 ಲೀಟರ್ ಯುಹೆಚ್‌ಟಿ) – 83 – 80 – 3
– ಪನೀರ್ (200 ಗ್ರಾಂ) – 99 – 95 – 5

– ಅಮುಲ್ ಟಬ್ ವೆನಿಲ್ಲಾ ಮ್ಯಾಜಿಕ್ (1ಲೀ) – 195 – 135 – 60
– ಕುಲ್ಫಿ ಪಂಜಾಬಿ (60ಮಿಲೀ) – 15 – 10 – 5
– ಅಮುಲ್ ಡಾರ್ಕ್ ಚಾಕೊಲೇಟ್ (150ಗ್ರಾಂ) – 200 – 180 – 20
– ಸಕ್ಕರೆ ರಹಿತ ಕುಕೀಸ್‌ನ (450ಗ್ರಾಂ) – 250 – 225 -25

Share This Article