ರಷ್ಯಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

Public TV
1 Min Read

ಮಾಸ್ಕೋ: ರಷ್ಯಾದ (Russia Earthquake) ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದ ಕರಾವಳಿಯಲ್ಲಿ ಶುಕ್ರವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಧಿಕಾರಿಗಳು ಸುನಾಮಿ ಎಚ್ಚರಿಕೆ ಹೊರಡಿಸಿದ್ದಾರೆ.

ರಷ್ಯಾದ ಸಾಮಾಜಿಕ ಮಾಧ್ಯಮದಲ್ಲಿ ಭೂಕಂಪಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್‌ ಆಗಿವೆ. ಮನೆಗಳಲ್ಲಿನ ಪೀಠೋಪಕರಣಗಳು, ವಸ್ತುಗಳು ಅಲುಗಾಡುತ್ತಿರುವ ಹಾಗೂ ಪಾರ್ಕ್‌ ಮಾಡಿದ ಕಾರುಗಳು ಹಿಂದಕ್ಕೆ ಮತ್ತು ಮುಂದಕ್ಕೆ ತೂಗಾಡುತ್ತಿರುವ ದೃಶ್ಯಗಳು ವೀಡಿಯೋದಲ್ಲಿ ಕಂಡುಬಂದಿವೆ. ಇದನ್ನೂ ಓದಿ: ನ.30 ರ ನಂತರ ಭಾರತದ ಮೇಲಿನ ಶೇ.25 ರಷ್ಟು ದಂಡ ಸುಂಕವನ್ನು ಅಮೆರಿಕ ತೆಗೆಯಬಹುದು: CEA

ಪ್ರದೇಶದ ರಾಜಧಾನಿ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಿಂದ ಪೂರ್ವಕ್ಕೆ 128 ಕಿಲೋಮೀಟರ್ (80 ಮೈಲು) ದೂರದಲ್ಲಿ ಮತ್ತು 10 ಕಿಲೋಮೀಟರ್ (ಆರು ಮೈಲು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ವರದಿ ಮಾಡಿದೆ. ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಹತ್ತಿರದ ಕರಾವಳಿಯಲ್ಲಿ ಅಪಾಯಕಾರಿ ಅಲೆಗಳು ಏಳಬಹುದು ಎಂದು ಎಚ್ಚರಿಕೆ ನೀಡಿದೆ.

ಪ್ರಸ್ತುತ ಯಾವುದೇ ಹಾನಿಯ ವರದಿಗಳಿಲ್ಲ. ಎಲ್ಲರೂ ಶಾಂತವಾಗಿರಲು ನಾನು ಕೇಳಿಕೊಳ್ಳುತ್ತೇನೆ. ಪರ್ಯಾಯ ದ್ವೀಪದ ಪೂರ್ವ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಪ್ರದೇಶದ ಗವರ್ನರ್ ವ್ಲಾಡಿಮಿರ್ ಸೊಲೊಡೊವ್ ತಿಳಿಸಿದ್ದಾರೆ.

ಜುಲೈನಲ್ಲಿ ಈ ಪ್ರದೇಶದ ಕರಾವಳಿಯಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪವು ಸಂಭವಿಸಿತ್ತು. ಇದು ಸುನಾಮಿಗೆ ಕಾರಣವಾಗಿತ್ತು. ಪರಿಣಾಮವಾಗಿ ಕರಾವಳಿ ಹಳ್ಳಿಯ ಒಂದು ಭಾಗ ಸಮುದ್ರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ ಕೇಸ್;‌ ಬೋಯಿಂಗ್‌, ಹನಿವೆಲ್‌ ವಿರುದ್ಧ ಮೃತರ ಕುಟುಂಬಗಳಿಂದ ಮೊಕದ್ದಮೆ

Share This Article