ಬೆಂಗಳೂರು: ಮತ ಕಳ್ಳತನದ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಉತ್ತರ ಕೊಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದ್ದಾರೆ.
ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಅವರು ವೋಟ್ ಕಳ್ಳತನ ಆಗಿದೆ ಅಂತ ಪ್ರೂವ್ ಮಾಡಿದ್ದಾರೆ. ಇಡೀ ದೇಶದಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಬಿಜೆಪಿ ಅವರು ಉತ್ತರ ಕೊಡಬೇಕು ಒತ್ತಾಯಿಸಿದ್ದಾರೆ.
ಬಿಜೆಪಿ ಅವರು ಮೌನವಾಗಿ ಇದ್ದಾರೆ ಅಂದರೆ ಕಳ್ಳತನ ಆಗಿದೆ ಅಂತ ಅರ್ಥ. ಮೋದಿ, ಅಮಿತ್ ಶಾ ಯಾಕೆ ಹೇಳಿಕೆ ಕೊಡ್ತಿಲ್ಲ? ಚುನಾವಣೆ ಆಯೋಗ ಯಾಕೆ ಉತ್ತರ ಕೊಡಬೇಕು? ದೇಶ ಆಳೋರು ಉತ್ತರ ಕೊಡಬೇಕು. ಇವರ ವರ್ತನೆ ನೋಡಿದ್ರೆ ಮತ ಚೋರಿ ಆಗಿರೋದು ಸತ್ಯ ಆಗಿದೆ. ಬಿಜೆಪಿ ಅವರು ಕಳ್ಳತನ ಮಾಡಿನೇ ಹಿಂದೆಲ್ಲಾ ಸರ್ಕಾರ ಮಾಡಿರೋದು ಅಂತ ಗೊತ್ತಾಗುತ್ತದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವುದೇ ಗೊಂದಲ ಇಲ್ಲ
ಸಮೀಕ್ಷೆಯಲ್ಲಿ ಮತಾಂತರ ವಿಚಾರದಲ್ಲಿ ಗೊಂದಲ ಆಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರ ಮಾಡುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿ, ಬಿಜೆಪಿ ನಾಯಕರಿಗೆ ಮಾತ್ರ ಗೊಂದಲ ಇರೋದು ಅಂತ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಸಮೀಕ್ಷೆ ಬಗ್ಗೆ ಜನರು ಗೊಂದಲದಲ್ಲಿ ಇಲ್ಲ. ಬಿಜೆಪಿ, ಬಿಜೆಪಿ ನಾಯಕರು ಗೊಂದಲದಲ್ಲಿ ಇದ್ದಾರೆ. ಜನರು 22 ರಂದು ಮಾಹಿತಿ ಬರೆಸೋಕೆ ಕಾಯುತ್ತಿದ್ದಾರೆ. ಈ ಸಮೀಕ್ಷೆ ಅದ್ರೆ ಬಡವರಿಗೆ ಸಿದ್ದರಾಮಯ್ಯ ಯೋಜನೆ ಮಾಡ್ತಾರೆ ಅಂತ ಬಿಜೆಪಿ ಅವರಿಗೆ ಭಯ. ನಾವು ಯೋಜನೆ ಕೊಟ್ಟರೆ ಬಿಜೆಪಿ ಅಸ್ಥಿತ್ವ ಹೋಗುತ್ತದೆ ಅಂತ ಭಯ ಇದೆ. ಹೀಗಾಗಿ, ಇಂತಹ ಆರೋಪ ಅಂತ ಕಿಡಿಕಾರಿದ್ದಾರೆ.
ಈಗಾಗಲೇ ಬಿಜೆಪಿ ಅವರು ಮತ ಕಳ್ಳತನ ಮಾಡಿದ್ದಾರೆ. ಕೇಂದ್ರ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಬಿಜೆಪಿ ಜಿರೋ ಆಗುತ್ತೆ. ಮುಂದೆ ಏನ್ ಮಾಡೋದು ಅಂತ ಅವರಿಗೆ ಭಯ. ಹೀಗಾಗಿ, ಇಂತಹ ವಿರೋಧ ಮಾಡ್ತಿದ್ದಾರೆ ಅಷ್ಟೆ ಎಂದಿದ್ದಾರೆ.