ʻಕೊತ್ತಲವಾಡಿʼ ಕಿರಿಕ್‌ – ಸಹನಟಿ ಸ್ವರ್ಣ ವಿರುದ್ಧ ದೂರು ದಾಖಲು

Public TV
2 Min Read

`ಕೊತ್ತಲವಾಡಿ’ ಚಿತ್ರದ (Kothalavadi Cinema) ಅಭಿನಯಕ್ಕೆ ತಮಗೆ ಸಂಭಾವನೆ ಬಂದಿಲ್ಲ ಎಂದು ಸಹನಟ ಮಹೇಶ್ ಗುರು ಹಾಗೂ ಸಹನಟಿ ಸ್ವರ್ಣ (Swarna) ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಶ್ರೀರಾಜ್ ಹಾಗೂ ನಿರ್ಮಾಣ ಸಂಸ್ಥೆ ವಿರುದ್ಧ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಶ್ರೀರಾಜ್, ಕಲಾವಿದ ಮಹೇಶ್ ವಿರುದ್ಧ ದೂರು ನೀಡಿದ್ದರು. ಇದೀಗ ಸಹನಟಿ ಸ್ವರ್ಣ ವಿರುದ್ಧವೂ ದೂರು ನೀಡಿದ್ದಾರೆ.

ಕೊತ್ತಲವಾಡಿ ಸಹನಟಿ ಸ್ವರ್ಣ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವೀಡಿಯೋ ಮೂಲಕ ನಿರ್ದೇಶಕರ ವಿರುದ್ಧ ಮಾತನಾಡಿದ್ದರು. ಸಿನಿಮಾದಲ್ಲಿ ಕಷ್ಟ ಪಟ್ಟು ನಟಿಸಿದ್ದೇನೆ. ಸಂಭಾವನೆಯ ಬಗ್ಗೆ ಮಾತನಾಡಿರುವಷ್ಟು ಅವರು ಹಣ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಹೀಗಾಗಿ ನಿರ್ದೇಶಕ ಶ್ರೀರಾಜ್, ನಟಿ ಸ್ವರ್ಣ ವಿರುದ್ಧ ದೂರು ದಾಖಲಿಸಿದ್ದಾರೆ.

ವೈಯಕ್ತಿಕ ತೇಜೋವಧೆ ಹಾಗೂ ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್ ಸಿನಿಮಾ ನಿರ್ಮಾಣ ಸಂಸ್ಥೆಗೆ ಮಾನಹಾನಿ ಮಾಡಿರುವುದನ್ನ ಖಂಡಿಸಿ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊತ್ತಲವಾಡಿ ನಿರ್ಮಾಪಕರಿಗೆ ಅನ್ಯಾಯವಾಗಿದೆ, ಗೊತ್ತಾಗ್ಲಿ ಅಂದೇ ಇಷ್ಟೆಲ್ಲಾ ಮಾಡಿದ್ದು: ನಟಿ ಸ್ವರ್ಣ

ದೂರಿನಲ್ಲಿ ಕಲಾವಿದರಿಗೆ ಈಗಾಗಲೇ ಹಣ ನೀಡಿರುವ ಮಾಹಿತಿ ಉಲ್ಲೇಖಿಸಿದ್ದು, ಸಂಬಂಧಿತ ದಾಖಲೆಗಳನ್ನ ಬಹಿರಂಗ ಪಡಿಸಿರುವುದಾಗಿಯೂ ಹೇಳಿದ್ದಾರೆ. ಆದ್ರೆ ಯಾವುದೂ ಅಗ್ರಿಮೆಂಟ್ ಪ್ರಕಾರ ನಡೆದಿಲ್ಲವಾದ ಕಾರಣ ಈ ಕಾನೂನು ಹೋರಾಟ ಯಾವಾಗ ತಾರ್ಕಿಕ ಅಂತ್ಯ ಕಾಣುತ್ತದೆ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಉಪೇಂದ್ರ ಸಿನಿಮಾಗೆ ಓಂ ಪ್ರಕಾಶ್ ರಾವ್ ನಿರ್ದೇಶನ

ನಿರ್ದೇಶಕರ ವಿರುದ್ಧ ಸ್ವರ್ಣ ಆರೋಪ ಏನು?
ವಿಡಿಯೋದಲ್ಲಿ ನಿರ್ದೇಶಕ ಶ್ರೀರಾಜ್ ಬಗ್ಗೆ ಮಾತನಾಡಿರುವ ಸ್ವರ್ಣ, ಸಿನಿಮಾದಲ್ಲಿ ಕಷ್ಟ ಪಟ್ಟು ನಟಿಸಿದ್ದೇನೆ. ಸಂಭಾವನೆಯ ಬಗ್ಗೆ ಮಾತನಾಡಿರುವಷ್ಟು ಅವರು ಹಣ ಕೊಟ್ಟಿಲ್ಲ. ಹಣವನ್ನೇ ಕೊಟ್ಟಿಲ್ಲ ಎಂದಿಲ್ಲ, 35 ಸಾವಿರ ರೂ. ಮಾತ್ರವೇ ಪೇಮೆಂಟ್ ಬಂದಿದೆ. ಅದೂ ಗೋಳಾಡಿದ ಮೇಲೆ ಬಂದಿರುವ ಹಣ. 48 ಸಾವಿರ ರೂ.ಗೆ ನಟಿಸಲು ಒಪ್ಪಿಕೊಂಡಿದ್ದೆ, ಬಾಕಿ ಇರುವ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಯಶ್ ತಾಯಿ ನಿರ್ಮಾಪಕಿ ಎಂಬ ಕಾರಣಕ್ಕೆ ಕಲಾವಿದರು ದುರಾಸೆಗೆ ಬಿದ್ದಿದ್ದಾರೆ ಎಂದು ಶ್ರೀರಾಜ್‌ ಹೇಳುತ್ತಾರೆ. ನಾನು ದುರಾಸೆಗೆ ಬಿದ್ದಿದ್ರೆ ಲಕ್ಷಲಕ್ಷ ಕೇಳಬಹುದಿತ್ತು. ನಾನು ಸಿಂಗಲ್ ಪೇರೆಂಟ್ ಮಗಳು. ಮೊದಲು ಮಾತನಾಡಿದ್ದಷ್ಟು ಹಣವನ್ನಾದರೂ ಕಳುಹಿಸಿಕೊಡಿ ಎಂದಿದ್ದೇನೆ ಅಷ್ಟೇ. ಈಗ ತಾಯಿ ಮಾತನಾಡಿರುವ ವೈರಲ್ ಆಗಿರುವ ಆಡಿಯೋ ಹಳೆಯದ್ದು ಎಂದು ಸ್ವರ್ಣ ಹೇಳಿದರು.

ಯಶ್‌ ತಾಯಿ ಬಗ್ಗೆ ಹೇಳಿದ್ದೇನು?
ಮುಖ್ಯವಾಗಿ ಯಶ್ ತಾಯಿ, ನಿರ್ಮಾಪಕಿ ಪುಷ್ಪ ಕುರಿತು ಮಾತನಾಡಿರುವ ಸ್ವರ್ಣ, ನಮ್ಮ ಚಿತ್ರದ ಪ್ರೊಡ್ಯೂಸರ್‌ಗೆ ಅನ್ಯಾಯವಾಗಿದೆ. ಅದು ಗೊತ್ತಾಗಲಿದ ಎಂದೇ ಇಷ್ಟೆಲ್ಲಾ ಮಾಡುತ್ತಿದ್ದೇನೆ. ನಮ್ಮ ಕೆಲವು ಒಂದಷ್ಟು ಕಲಾವಿದರಿಗೆ ದುಡ್ಡು ಬಂದಿಲ್ಲ. ಹೇಳೋಕೆ ಭಯ ಆಗಿ ಸುಮ್ಮನೇ ಇದ್ದಾರೆ. ನಾನು ಹೋರಾಡುತ್ತೇನೆ. ಗೊತ್ತಾಗ್ಲಿ ಎಂದೇ ಧ್ವನಿ ಎತ್ತಿದ್ದೇನೆ. ನಿರ್ದೇಶಕರ ಪತ್ನಿಗೂ ಕರೆ ಮಾಡಿದ್ದೆ ನಿರ್ದೇಶಕರೂ ಕರೆ ಮಾಡುತ್ತಿದ್ದೆ ಅವರು ನನಗೆ ಅನ್ಯಾಯ ಮಾಡಿದ್ದಾರೆ. ಅವರ ಬಳಿ ಯಾವುದೇ ಸಾಕ್ಷಿ ಇಲ್ಲ. ನಮಗೆ ಕಣ್ಣೀರು ಹಾಕಿಸಿದ್ದಾರೆ ಕರ್ಮ ಎನ್ನುವುದು ಬಿಡುವುದಿಲ್ಲ. ಅವರ ಹತ್ತಿರ ದುಡ್ಡು ಇರಬಹುದು. ಆದರೆ ಕರ್ಮ ಅವರನ್ನು ಬಿಡುವುದಿಲ್ಲ ಎಂದು ಸ್ವರ್ಣ ಸಿಟ್ಟು ಹೊರಹಾಕಿದ್ದಾರೆ.

Share This Article