ಕೊತ್ತಲವಾಡಿ (Kothalavadi) ಚಿತ್ರದ ಕಲಾವಿದರಿಗೆ ಸಂಭಾವನೆ ನೀಡದ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ನಿರ್ದೇಶಕರ ಮೇಲೆ ಸಹ ನಟ, ನಟಿಯರು ಆರೋಪ ಮಾಡಿದ್ದಾರೆ. ಸಹ ನಟಿ ಸ್ವರ್ಣ ಅವರಿಗೆ ಪೇಮೆಂಟ್ ಕ್ಲೀಯರ್ ಆಗಿಲ್ಲ ಎಂದು ಆಕೆಯ ತಾಯಿ ನಿರ್ದೇಶಕರ ಜೊತೆ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಯೂಟ್ಯೂಬ್‌ನಲ್ಲಿ ಸ್ವರ್ಣ (Swarna) ವಿಡಿಯೋ ಮಾಡಿ ಹಲವಾರು ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ವಿಡಿಯೋದಲ್ಲಿ ನಿರ್ದೇಶಕ ಶ್ರೀರಾಜ್ ಬಗ್ಗೆ ಮಾತನಾಡಿರುವ ಸ್ವರ್ಣ, ಸಿನಿಮಾದಲ್ಲಿ ಕಷ್ಟ ಪಟ್ಟು ನಟಿಸಿದ್ದೇನೆ. ಸಂಭಾವನೆಯ ಬಗ್ಗೆ ಮಾತನಾಡಿರುವಷ್ಟು ಅವರು ಹಣ ಕೊಟ್ಟಿಲ್ಲ. ಹಣವನ್ನೇ ಕೊಟ್ಟಿಲ್ಲ ಎಂದಿಲ್ಲ, 35 ಸಾವಿರ ರೂ. ಮಾತ್ರವೇ ಪೇಮೆಂಟ್ ಬಂದಿದೆ. ಅದೂ ಗೋಳಾಡಿದ ಮೇಲೆ ಬಂದಿರುವ ಹಣ. 48 ಸಾವಿರ ರೂ.ಗೆ ನಟಿಸಲು ಒಪ್ಪಿಕೊಂಡಿದ್ದೆ, ಬಾಕಿ ಇರುವ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ.
ಯಶ್ ತಾಯಿ ನಿರ್ಮಾಪಕಿ ಎಂಬ ಕಾರಣಕ್ಕೆ ಕಲಾವಿದರು ದುರಾಸೆಗೆ ಬಿದ್ದಿದ್ದಾರೆ ಎಂದು ಶ್ರೀರಾಜ್ ಹೇಳುತ್ತಾರೆ. ನಾನು ದುರಾಸೆಗೆ ಬಿದ್ದಿದ್ರೆ ಲಕ್ಷಲಕ್ಷ ಕೇಳಬಹುದಿತ್ತು. ನಾನು ಸಿಂಗಲ್ ಪೇರೆಂಟ್ ಮಗಳು. ಮೊದಲು ಮಾತನಾಡಿದ್ದಷ್ಟು ಹಣವನ್ನಾದರೂ ಕಳುಹಿಸಿಕೊಡಿ ಎಂದಿದ್ದೇನೆ ಅಷ್ಟೇ. ಈಗ ತಾಯಿ ಮಾತನಾಡಿರುವ ವೈರಲ್ ಆಗಿರುವ ಆಡಿಯೋ ಹಳೆಯದ್ದು ಎಂದು ಸ್ವರ್ಣ ಹೇಳಿದರು.
ಮುಖ್ಯವಾಗಿ ಯಶ್ ತಾಯಿ, ನಿರ್ಮಾಪಕಿ ಪುಷ್ಪ ಕುರಿತು ಮಾತನಾಡಿರುವ ಸ್ವರ್ಣ, ನಮ್ಮ ಚಿತ್ರದ ಪ್ರೊಡ್ಯೂಸರ್‌ಗೆ ಅನ್ಯಾಯವಾಗಿದೆ. ಅದು ಗೊತ್ತಾಗಲಿದ ಎಂದೇ ಇಷ್ಟೆಲ್ಲಾ ಮಾಡುತ್ತಿದ್ದೇನೆ. ನಮ್ಮ ಕೆಲವು ಒಂದಷ್ಟು ಕಲಾವಿದರಿಗೆ ದುಡ್ಡು ಬಂದಿಲ್ಲ. ಹೇಳೋಕೆ ಭಯ ಆಗಿ ಸುಮ್ಮನೇ ಇದ್ದಾರೆ. ನಾನು ಹೋರಾಡುತ್ತೇನೆ. ಗೊತ್ತಾಗ್ಲಿ ಎಂದೇ ಧ್ವನಿ ಎತ್ತಿದ್ದೇನೆ ಎಂದರು.
ನಿರ್ದೇಶಕರ ಪತ್ನಿಗೂ ಕರೆ ಮಾಡಿದ್ದೆ ನಿರ್ದೇಶಕರೂ ಕರೆ ಮಾಡುತ್ತಿದ್ದೆ ಅವರು ನನಗೆ ಅನ್ಯಾಯ ಮಾಡಿದ್ದಾರೆ. ಅವರ ಬಳಿ ಯಾವುದೇ ಸಾಕ್ಷಿ ಇಲ್ಲ. ನಮಗೆ ಕಣ್ಣೀರು ಹಾಕಿಸಿದ್ದಾರೆ ಕರ್ಮ ಎನ್ನುವುದು ಬಿಡುವುದಿಲ್ಲ. ಅವರ ಹತ್ತಿರ ದುಡ್ಡು ಇರಬಹುದು. ಆದರೆ ಕರ್ಮ ಅವರನ್ನು ಬಿಡುವುದಿಲ್ಲ ಎಂದು ಸ್ವರ್ಣ ಸಿಟ್ಟು ಹೊರಹಾಕಿದ್ದಾರೆ.