ಐಟಿ ರಿಟರ್ನ್‌ ಸಲ್ಲಿಕೆ- ಲಾಸ್ಟ್‌ ಡೇಟ್‌ ಯಾವುದೇ ಕಾರಣಕ್ಕೂ ವಿಸ್ತರಣೆಯಾಗಲ್ಲ

Public TV
1 Min Read

ನವದೆಹಲಿ: 2024-25ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (IT Return Filing) ಸಲ್ಲಿಸುವ ಕೊನೆಯ ದಿನಾಂಕವನ್ನು (Last Date) ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಸ್ಪಷ್ಟಪಡಿಸಿದೆ.

ಐಟಿಆರ್‌ಗಳನ್ನು ಸಲ್ಲಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಸೂಚಿಸುವ ಸುಳ್ಳು ಸುದ್ದಿಯನ್ನು ತೆರಿಗೆ ಇಲಾಖೆ ತಳ್ಳಿಹಾಕಿದೆ. ತೆರಿಗೆದಾರರು ಅಧಿಕೃತ ಆದಾಯ ತೆರಿಗೆ ಆಫ್ ಇಂಡಿಯಾ ಎಕ್ಸ್ ಹ್ಯಾಂಡಲ್‌ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ನಂಬಬೇಕು ಎಂದು ತಿಳಿಸಿದೆ.

ಐಟಿಆರ್ ಫೈಲಿಂಗ್, ತೆರಿಗೆ ಪಾವತಿ ಮತ್ತು ಇತರ ಸಂಬಂಧಿತ ಸೇವೆಗಳಿಗೆ ತೆರಿಗೆದಾರರಿಗೆ ಸಹಾಯ ಮಾಡಲು, ನಮ್ಮ ಸಹಾಯವಾಣಿ 24/7 ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ನಾವು ಕರೆಗಳು, ಲೈವ್ ಚಾಟ್‌ಗಳು, ವೆಬ್ ಎಕ್ಸ್ ಸೆಷನ್‌ಗಳು, ಮತ್ತು ಎಕ್ಸ್ ಮೂಲಕ ಬೆಂಬಲವನ್ನು ಒದಗಿಸುತ್ತಿದ್ದೇವೆ ಎಂದು ತೆರಿಗೆ ಇಲಾಖೆ ಹೇಳಿದೆ.

ಐಟಿಆರ್‌ ಫೈಲಿಂಗ್‌ಗೆ ಇಂದು(ಸೆ.15) ಕೊನೆಯ ದಿನವಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸೆ.30 ರವರೆಗೆ ವಿಸ್ತರಿಸಲಾಗಿದೆ ಎಂಬ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದೆ.

Share This Article