14 ಸೈಟ್ ನುಂಗಿದ ನೀವು ನನಗೆ ಹೇಳಲು ಬರೋದು ಬೇಡ: ಸಿಎಂಗೆ ಪ್ರತಾಪ್‌ ತಿರುಗೇಟು

2 Min Read

ಬೆಂಗಳೂರು:  14 ಸೈಟ್ ನುಂಗಿದ ನೀವು ನನಗೆ ಹೇಳಲು ಬರುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ.

ಬಾನು ಮುಷ್ತಾಕ್ (Banu Mushtaq) ದಸರಾ (Mysuru Dasara) ಉದ್ಘಾಟನೆ ಮಾಡಬಾರದು ಎಂದು ಹೇಳಿದ ಪ್ರತಾಪ್ ಸಿಂಹ ಮೂರ್ಖ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಸರ್ ಏನು ಬೇಕಾದರೂ ನನ್ನ ಕರೆಯಲಿ. ಅವರಿಗೂ ಸೋಷಿಯಲ್ ಮೀಡಿಯಾದಲ್ಲಿ ಏನೇನು ಕರೆಯುತ್ತಾರೆ ಎನ್ನುವುದನ್ನು ನೋಡಲಿ. ಅದನ್ನು ನೋಡಿದರೆ ಅವರು ಮುಖ ಮುಚ್ಚಿಕೊಂಡು ಓಡಾಡಬೇಕಾಗುತ್ತದೆ ಎಂದು ಹೇಳಿದರು.

ಹೈಕೋರ್ಟ್‌ನಲ್ಲಿ ತನ್ನ ಅರ್ಜಿ ವಜಾಗೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೋರ್ಟ್ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಜಾತ್ಯಾತೀತತೆಯ ಚೌಕಟ್ಟಿನ ಅಡಿಯಲ್ಲಿ ಪಿಐಎಲ್ (PIL) ವಜಾ ಆಗಿದೆ. ಅದೇ ವಾಕ್ ಸ್ವಾತಂತ್ರ‍್ಯ ಬಳಸಿಕೊಂಡು ಮಾತನಾಡುತ್ತಿದ್ದೇನೆ ಅಷ್ಟೇ ಎಂದರು.  ಇದನ್ನೂ ಓದಿ:  ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಪ್ರತಾಪ್‌ ಸಿಂಹ ಸೇರಿ ಮೂವರು ಸಲ್ಲಿಸಿದ್ದ ಅರ್ಜಿ ವಜಾ

ಬಾನು ಮುಷ್ತಾಕ್ ಭುವನೇಶ್ವರಿ ಬಗ್ಗೆ, ಅರಿಶಿನ ಕುಂಕುಮ ಹೇಳಿಕೆ ಬಗ್ಗೆ ಕನಿಷ್ಟ ಕ್ಷಮೆಯನ್ನು ಕೋರಿಲ್ಲ. ಅದಕ್ಕಾಗಿ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ. ಭಾರತದ ಮೂಲ ಸಂಸ್ಕೃತಿಗೆ ಇದೇ ರೀತಿ ಅಪಮಾನ, ಧಕ್ಕೆ ಆಗೋದನ್ನೂ ಹೀಗೆ ಸಹಿಸಿಕೊಳ್ತೀರಾ? ದಾರ್ಷ್ಟ್ಯ, ದ್ವೇಷದಿಂದ ಈ ರೀತಿ ಹೇಳಿಕೆಗಳನ್ನು ಕೊಡೋದಾದ್ರೆ ಪರಿಸ್ಥಿತಿ ಏನಾಗಬೇಕು? ಸೆಕ್ಯುಲರ್ ಪರಿಧಿಯಲ್ಲಿ ನೋಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮುಡಾದಲ್ಲಿ 14 ಸೈಟುಗಳನ್ನು ಪಡೆದಿದ್ದು ಹಗಲುದರೋಡೆ ಆಗಿತ್ತು. ಇಂಥ ಹಗಲು ದರೋಡೆ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ವಜಾ ಮಾಡಲಾಯಿತು. ಹಾಗೇ ಧರ್ಮಸ್ಥಳ ಮೇಲೆ ಅಪನಂಬಿಕೆ ಬರುವಂಥ ವಿಡಿಯೋ ಸಮೀರ್ ಮಾಡಿದ್ದ. ಇಷ್ಟೆಲ್ಲ ಕೆಲಸ ಮಾಡಿದ ಸಮೀರ್‌ಗೆ ಸೆಷನ್ ಕೋರ್ಟ್ ಜಾನೀನು ನೀಡಿತು. ಮಹೇಶ್ ತಿಮರೋಡಿ ಕೂಡಾ ಆರಾಮವಾಗಿ ಓಡಾಡಿಕೊಂಡಿದ್ದಾನೆ ಎಂದರು. ಇದನ್ನೂ ಓದಿ: ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು ಅನ್ನೋ ಪ್ರತಾಪ್ ಸಿಂಹ ಮೂರ್ಖ: ಸಿದ್ದರಾಮಯ್ಯ

ಪ್ರದೀಪ್ ಈಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗುದ್ದಾಡಿದರೆ ಗಂಧದ ಜೊತೆ ಗುದ್ದಾಟ ಮಾಡಬೇಕು. ಹಂದಿ ಜೊತೆ, ಕೂಗುಮಾರಿಗಳ ಜತೆ ಗುದ್ದಾಟ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ಪ್ರತಾಪ್ ಸಿಂಹ ಜತೆ ಸೇರಿ ಹೊಸ ಪಕ್ಷ ಕಟ್ಟೋದಾಗಿ ಯತ್ನಾಳ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್‌ ಸಿಂಹ, ನನ್ನ ತಂದೆ ಜನಸಂಘದ ದೀಪದ ಚಿಹ್ನೆಯಿಂದ ಗೆದ್ದವರು. ಬಿಬಿ ಶಿವಪ್ಪ ಜೊತೆ ಇದ್ದವರಯ ನಮ್ಮ ತಂದೆ. ನಮ್ಮ ಕೌಟುಂಬಿಕ ನಿಷ್ಠೆ ಸಂಘಕ್ಕೆ, ಬಿಜೆಪಿಗೆ ಇದೆ. ನಾನು ಮೂಲತ: ಪತ್ರಕರ್ತ, ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು. ಇದನ್ನೂ ಓದಿ:  ಪ್ರತಾಪ್ ತಂದೆ-ತಾಯಿ ದೈವ ಭಕ್ತರಿರಬೇಕು, ಇಲ್ಲಂದ್ರೆ ಕೋತಿ ಅಂತ ಹೆಸರಿಡ್ತಿದ್ರು: ಪ್ರದೀಪ್ ಈಶ್ವರ್

ನಾನು ಅಧಿಕಾರ ಇರಲಿ ಇಲ್ಲದಿರಲಿ ಪಕ್ಷ ಬಿಡುವುದಿಲ್ಲ. ಯತ್ನಾಳ್ ಜತೆ ಸೇರಿ ಹೊಸ ಪಕ್ಷ ಕಟ್ಟುವ ಯೋಚನೆ ಇಲ್ಲ. ಬಿಜೆಪಿ ಪಕ್ಷದಲ್ಲೇ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ. ಯತ್ನಾಳ್ ಅವರಿಗೂ ಇದನ್ನೇ ಹೇಳಿದ್ದೇನೆ ಎಂದು ತಿಳಿಸಿದರು.

Share This Article