ಲಕ್ನೋ: ಭಾನುವಾರ ನಡೆಯಲಿರುವ 2025 ರ ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವಿಗಾಗಿ ವಿಶ್ವ ಹಿಂದೂ ರಕ್ಷಾ ಪರಿಷತ್ ವಿಶೇಷ ಹೋಮ-ಹವನ, ಪೂಜೆ ಮಾಡಿ ಪ್ರಾರ್ಥಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮೊದಲ ಬಾರಿಗೆ ಪಾಕಿಸ್ತಾನದೊಂದಿಗೆ ಮುಖಾಮುಖಿಯಾಗಲು ಸಜ್ಜಾಗಿರುವ ಭಾರತ ಕ್ರಿಕೆಟ್ ತಂಡದೊಂದಿಗೆ ನಿಲ್ಲುವ ಸಮಯ ಇದೀಗ ಬಂದಿದೆ ಎಂದು ವಿಶ್ವ ಹಿಂದೂ ರಕ್ಷಾ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಗೋಪಾಲ್ ರೈ ಹೇಳಿದ್ದಾರೆ. ಇದನ್ನೂ ಓದಿ: ಬದ್ಧವೈರಿಗಳ ಕ್ರಿಕೆಟ್ ಕಾದಾಟಕ್ಕೆ ಬಾಯ್ಕಾಟ್ ಬಿಸಿ; ಮೋದಿ ಈಗ ಏಕೆ ಮೌನ? – ಶಿವಸೇನೆ
ಭಾರತ ಯಾವಾಗಲೂ ಗೆದ್ದಿದೆ. ಭಾರತ ಯಾವಾಗಲೂ ಗೆಲ್ಲುತ್ತದೆ. ಪಹಲ್ಗಾಮ್ನಲ್ಲಿ ಅಮಾಯಕ ಜನರನ್ನು ಕೊಂದಿದ್ದಕ್ಕೆ ನಮ್ಮ ಪ್ರಧಾನಿ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಂಡರು. ಕೆಲವರು ಪಂದ್ಯದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಆದರೆ ವಿಶ್ವ ಹಿಂದೂ ರಕ್ಷಾ ಪರಿಷತ್ ನಂಬುವುದೇನೆಂದರೆ, ನಾವು ಆಡದಿದ್ದರೆ ಭಾರತವು ಪಾಕಿಸ್ತಾನವನ್ನು ಒಂದೇ ಬಾರಿಗೆ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಜಗತ್ತಿಗೆ ಹೇಗೆ ತಿಳಿಯುತ್ತದೆ? ನಾವು ನಮ್ಮ ಭಾರತೀಯ ಕ್ರಿಕೆಟಿಗರ ಜೊತೆ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಇ ವಿರುದ್ಧ ಒಂಬತ್ತು ವಿಕೆಟ್ಗಳಿಂದ ಮೇಲುಗೈ ಸಾಧಿಸಿದರೆ, ಪಾಕಿಸ್ತಾನ ಹಾಂಗ್ಕಾಂಗ್ ಚೀನಾ ತಂಡವನ್ನು 93 ರನ್ಗಳಿಂದ ಸುಲಭವಾಗಿ ಮಣಿಸಿತು. ಈ ಫಲಿತಾಂಶವು ಸೂಪರ್ ಫೋರ್ಗೆ ಹೋಗುವ ಓಟದಲ್ಲಿ ಭಾನುವಾರದ ಪಂದ್ಯವನ್ನು ನಿರ್ಣಾಯಕವಾಗಿಸಿದೆ. ಇದನ್ನೂ ಓದಿ: ದುಬೈನಲ್ಲಿ ಇಂಡಿಯಾ-ಪಾಕ್ ಮ್ಯಾಚ್ನ ಟಿಕೆಟ್ ಅನ್ ಸೋಲ್ಡ್!
ಪಂದ್ಯವನ್ನು ಬಹಿಷ್ಕರಿಸುವಂತೆ ವಿರೋಧ ಪಕ್ಷಗಳಿಂದ ಒತ್ತಾಯ ಕೇಳಿಬಂದಿದೆ. ಆದಾಗ್ಯೂ, ಯಾವುದೇ ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಭಾರತ ತಂಡದಿಂದ ಕೇಂದ್ರವು ಯಾವುದೇ ಆಕ್ಷೇಪಣೆಯನ್ನು ವ್ಯಕ್ತಪಡಿಸಿರಲಿಲ್ಲ.