ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್

Public TV
1 Min Read

– ರಿಷಬ್‌ ಶೆಟ್ಟಿ ನಿಜಕ್ಕೂ ಮಾಸ್ಟರ್‌ಪೀಸ್‌ ಎಂದ ಸಿಂಗರ್‌

ಕಾಂತಾರ-1 ಚಿತ್ರವನ್ನ (Kantara Chapter 1) ನೋಡುವ ಕುತೂಹಲ ಹೆಚ್ಚಾಗಿದೆ. ಈ ಹೊತ್ತಲ್ಲೇ ಚಿತ್ರತಂಡ ಅಚ್ಚರಿಯ ಸುದ್ದಿಯೊಂದನ್ನ ಬಹಿರಂಗಪಡಿಸಿದೆ. ಕಾಂತಾರ-1 ಚಿತ್ರಕ್ಕಾಗಿ ವಿವಾದಾತ್ಮಕ ಪಂಜಾಬಿ ಸಿಂಗರ್ ದಿಲ್ಜಿತ್ ಸಿಂಗ್ ಎಂಟ್ರ ಕೊಟ್ಟಿರುವ ವಿಚಾರವನ್ನ ಘೋಷಿಸಿದೆ ತಂಡ.

ದಿಲ್ಜಿತ್ ಸಿಂಗ್ (Diljit Dosanjh) ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ ತಂಡದ ಜೊತೆ ತಾವು ಕೈಜೋಡಿಸಿರುವ ವಿಚಾರ ಹೇಳಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಕೂಡ ಕಾಂತಾರ ತಂಡಕ್ಕೆ ಇನ್ನೊಬ್ಬ ಶಿವಭಕ್ತನ ಆಗಮನವಾಗಿದೆ ಎಂದು ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮರಳಿ ಮನಸಾಗಿದೆ ಸಾಂಗ್ ರಿಲೀಸ್ ಮಾಡಿದ ನಟಿ ಪ್ರೇಮಾ

ರಾಷ್ಟ್ರಪ್ರಶಸ್ತಿ ವಿಜೇತ ನಟ-ಗಾಯಕ ದಿಲ್ಜಿತ್ ಸಿಂಗ್ ದೋಸಾಂಜ್, ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿಯೊಂದಿಗೆ (Rishab Shetty) `ಕಾಂತಾರ-ಅಧ್ಯಾಯ 1’ರ ಸಂಗೀತ ಆಲ್ಬಂನಲ್ಲಿ ಕೈಜೋಡಿಸಿದ್ದಾರೆ. ಈ ಸಂಗತಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದಿಲ್ಜಿತ್, ಮೂಲ `ಕಾಂತಾರ’ ಸಿನಿಮಾ ತಮ್ಮ ಮೇಲೆ ಮಾಡಿದ ಪರಿಣಾಮವನ್ನು ಸ್ಮರಿಸಿದ್ದಾರೆ. ‘ಅಣ್ಣ ರಿಷಬ್ ಶೆಟ್ಟಿ ಅವರಿಗೆ ನನ್ನ ಸಲಾಂ. ಅವರು ನಿಜಕ್ಕೂ ಒಂದು ಮಾಸ್ಟರ್‌ಪೀಸ್. ಆ ಸಿನಿಮಾದೊಂದಿಗೆ ನನಗೆ ವೈಯಕ್ತಿಕ ನಂಟಿದೆ. ಅದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಚಿತ್ರಮಂದಿರದಲ್ಲಿ `ವರಾಹ ರೂಪಂ’ ಹಾಡು ಬಂದಾಗ, ಆನಂದಬಾಷ್ಪದಿಂದ ಕಣ್ಣು ತುಂಬಿಕೊಂಡಿದ್ದೆ’ ಎಂದು ಭಾವುಕರಾಗಿ ಬರೆದಿದ್ದಾರೆ.

ಈ ಬಹುನಿರೀಕ್ಷಿತ ಚಿತ್ರಕ್ಕಾಗಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೊಂದಿಗೆ ಕೆಲಸ ಮಾಡಿದ ಬಗ್ಗೆಯೂ ದಿಲ್ಜಿತ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಕೇವಲ ಒಂದೇ ದಿನದಲ್ಲಿ ಅವರಿಂದ ಸಾಕಷ್ಟು ಕಲಿತುಕೊಂಡೆ’ ಎಂದು ತಿಳಿಸಿದ್ದಾರೆ. ದಿಲ್ಜಿತ್ ದೋಸಾಂಜ್ ಮತ್ತು ರಿಷಬ್ ಶೆಟ್ಟಿ ಮೈತ್ರಿ ತೆರೆಯಲ್ಲಿ ರೋಮಾಂಚನ ಹುಟ್ಟಿಸೋದನ್ನ ನೋಡುವ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಇನ್ಮುಂದೆ ಮಲ್ಟಿಪ್ಲೆಕ್ಸ್ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ; ಪ್ರತಿ ಟಿಕೆಟ್‍ಗೆ ಇಷ್ಟೇ ಬೆಲೆ

Share This Article