ಮುಂಬೈ: ಕಾಂಡ್ಲಾದಿಂದ (Kandla) ಮುಂಬೈಗೆ (Mumbai) ತೆರಳುತ್ತಿದ್ದ ಸ್ಪೈಸ್ಜೆಟ್ ವಿಮಾನದ (Spicejet Aircraft) ಚಕ್ರ ಟೇಕಾಫ್ (Take Off) ಆಗುವಾಗ ಕಳಚಿಕೊಂಡ ಆಘಾತಕಾರಿ ಘಟನೆ ನಡೆದಿದೆ. ಇಷ್ಟಾದರೂ ವಿಮಾನ ಮುಂಬೈಗೆ ಪ್ರಯಾಣಬೆಳೆಸಿ, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
New :
– A @flyspicejet plane’s outer wheel flew away after take-off at Kandla
– Full emergency was declared at Mumbai airport
– Plane landed safely thankfully@DGCAIndia @AviationSafety pic.twitter.com/EFpG1t0jwh
— Tarun Shukla (@shukla_tarun) September 12, 2025
ಸ್ಪೈಸ್ಜೆಟ್ Q400 ವಿಮಾನ 75 ಪ್ರಯಾಣಿಕರನ್ನು ಹೊತ್ತು ಇಂದು (ಸೆ.12) ಮಧ್ಯಾಹ್ನ 2:39ಕ್ಕೆ ಕಾಂಡ್ಲಾ ವಿಮಾನ ನಿಲ್ದಾಣದ ರನ್ವೇ 23 ರಿಂದ ಟೇಕಾಫ್ ಆಗಿತ್ತು. ಈ ವೇಳೆ ವಿಮಾನದಿಂದ ಕಪ್ಪು ಬಣ್ಣದ ದೊಡ್ಡ ವಸ್ತು ಬೀಳುತ್ತಿರುವುದು ಕಾಣಿಸಿತ್ತು. ಪರಿಶೀಲನೆ ನಡೆಸಿದಾಗ ಅದು ವಿಮಾನದ ಚಕ್ರ ಎಂದು ತಿಳಿದುಬಂದಿತ್ತು. ಸ್ಪೈಸ್ ಜೆಟ್ ಈ ಘಟನೆಯನ್ನು ದೃಢಪಡಿಸಿದೆ. ಇದನ್ನೂ ಓದಿ: ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಮೂತಿಗೆ ಹಕ್ಕಿ ಡಿಕ್ಕಿ
ವಿಮಾನವು ಮುಂಬೈ ತಲುಪುತ್ತಿದ್ದಂತೆ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ, ಲ್ಯಾಂಡ್ ಮಾಡಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊಂಬಾರ್ಡಿಯರ್ DHC8-400 ವಿಮಾನವು ಟ್ರೈಸಿಕಲ್ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಹೊಂದಿದೆ. ನೋಸ್ ಗೇರ್ನಲ್ಲಿ ಎರಡು ಚಕ್ರಗಳು ಮತ್ತು ಪ್ರತಿ ಮುಖ್ಯ ಲ್ಯಾಂಡಿಂಗ್ ಗೇರ್ನಲ್ಲಿ ಎರಡು ಚಕ್ರಗಳಿವೆ. ಇದರಲ್ಲಿ ವಿಮಾನದ ಬಲಭಾಗದ ಲ್ಯಾಂಡಿಂಗ್ ಗೇರ್ನ ಒಂದು ಚಕ್ರ ಕಳಚಿ ಬಿದ್ದಿದೆ. ವಿಮಾನ ಲ್ಯಾಂಡ್ ಆಗುವಾಗ ಒಂದು ಬದಿಯ ಚಕ್ರ ಇಲ್ಲದೇ ರನ್ವೇಯಲ್ಲಿ ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ವಿಮಾನಕ್ಕೆ ಬಿಳಿ ಬಣ್ಣ ಹಚ್ಚೋದ್ಯಾಕೆ?