ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

Public TV
1 Min Read

– ತಿರುಮಲ ಭಕ್ತರಿಗೆ ಅನ್ನಪ್ರಸಾದ ಬಡಿಸಿದ ಸಚಿವೆ

ಅಮರಾವತಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತಿರುಪತಿಗೆ (Tirupati) ಭೇಟಿ ನೀಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಟಿಟಿಡಿ ಅಧಿಕಾರಿಗಳು ಅವರಿಗೆ ಭವ್ಯ ಸ್ವಾಗತ ನೀಡಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ದರ್ಶನದ ನಂತರ, ರಂಗನಾಯಕಕುಲ ಮಂಟಪದಲ್ಲಿ ವಿದ್ವಾಂಸರು ಅವರನ್ನು ಆಶೀರ್ವದಿಸಿ ದೇವರ ಕಾಣಿಕೆಗಳನ್ನು ನೀಡಿದರು. ಇದನ್ನೂ ಓದಿ: ದೇಶದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಪ್ರಮಾಣ ಸ್ವೀಕಾರ

ಗುರುವಾರ ಸಂಜೆ ಕುಟುಂಬ ಸದಸ್ಯರೊಂದಿಗೆ ತಿರುಮಲ ಬೆಟ್ಟದ ಪಟ್ಟಣಕ್ಕೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದರು. ಶ್ರೀ ಗಾಯತ್ರಿ ವಿಶ್ರಾಂತಿ ಗೃಹಕ್ಕೆ ಆಗಮಿಸಿದ ಅವರನ್ನು ಟಿಟಿಡಿ ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಆತ್ಮೀಯವಾಗಿ ಸ್ವಾಗತಿಸಿದ್ದರು.

ಕೇಂದ್ರ ಸಚಿವರು ಶುಕ್ರವಾರ ಬೆಳಗ್ಗೆ ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿದರು. ಸಿವಿಎಸ್ಒ ಮುರಳೀಕೃಷ್ಣ, ಸ್ವಾಗತ ಉಪ ಕಾರ್ಯನಿರ್ವಾಹಕ ಅಧಿಕಾರಿ ಭಾಸ್ಕರ್ ಇತರರು ಉಪಸ್ಥಿತರಿದ್ದರು. ಪೂಜೆ ಬಳಿಕ ನಿರ್ಮಲಾ ಸೀತಾರಾಮನ್‌ ಅವರು ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಗಮಾಂಬ ಅನ್ನಪ್ರಸಾದ ಸಂಕೀರ್ಣದಲ್ಲಿ ಭಕ್ತರಿಗೆ ಪ್ರಸಾದ ಬಡಿಸಿದರು.

ಮತ್ತೊಂದೆಡೆ, ಸಂಗೀತಗಾರ ಅನಿರುದ್ಧ್ ರವಿಚಂದರ್ ಅವರು ಇಂದು ಮುಂಜಾನೆ ಅಭಿಷೇಕ ಸೇವೆಯಲ್ಲಿ ಭಾಗವಹಿಸಿ ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಅಧಿಕಾರಿಗಳು ಅವರಿಗೆ ತೀರ್ಥ ಪ್ರಸಾದವನ್ನು ನೀಡಿದರು. ಇದನ್ನೂ ಓದಿ: 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕಾರ

Share This Article