ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಕುಸಿದ ಮಸ್ಕ್

Public TV
1 Min Read

– ಒರಾಕಲ್ ಕಂಪನಿಯ ಲ್ಯಾರಿ ಎಲ್ಲಿಸ್ಸನ್‌ಗೆ ಅಗ್ರಸ್ಥಾನ

ವಾಷಿಂಗ್ಟನ್: ಕಳೆದ 1 ವರ್ಷದಿಂದ ವಿಶ್ವದ ನಂ.1 ಶ್ರೀಮಂತ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ (Elon Musk) ಈಗ ನಂ.2ಕ್ಕೆ ಕುಸಿದಿದ್ದಾರೆ.

ಹೌದು, ಕಳೆದೊಂದು 1 ವರ್ಷದಿಂದ ಎಲಾನ್ ಮಸ್ಕ್ ವಿಶ್ವದ ನಂ.1 ಶ್ರೀಮಂತ ಸ್ಥಾನದಲ್ಲಿದ್ದರು. ಆದರೆ ಇದೀಗ ನಂ.2ಕ್ಕೆ ಇಳಿದಿದ್ದಾರೆ. ಒರಾಕಲ್ ಕಂಪನಿ ಸಹಸಂಸ್ಥಾಪಕ ಲ್ಯಾರಿ ಎಲ್ಲಿಸ್ಸನ್ (Larry Ellison) ವಿಶ್ವದ ನಂ.1 ಶ್ರೀಮಂತ ಪಟ್ಟವನ್ನು ಬಾಚಿಕೊಂಡಿದ್ದಾರೆ.ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಬಂದೂಕು ಸಂಸ್ಕೃತಿ ವಿರೋಧಿಸಿ ಮಾತನಾಡುವಾಗಲೇ ಟ್ರಂಪ್‌ ಸ್ನೇಹಿತ, ಉದ್ಯ

ಲ್ಯಾರಿ ಅವರ ಆಸ್ತಿಯು ಸೋಮವಾರ (ಸೆ.8) ಬರೋಬ್ಬರಿ 101 ಬಿಲಿಯನ್ ಡಾಲರ್ ವೃದ್ಧಿಯಾಗಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದರಿಂದಾಗಿ ಇವರ ಒಟ್ಟು ಆಸ್ತಿಯು 393 ಬಿಲಿಯನ್ ಡಾಲರ್‌ಗೆ (34 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಎಲಾನ್ ಮಸ್ತ್ 385 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ (33 ಲಕ್ಷ ಕೋಟಿ ರೂ.) 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

Share This Article