ಪ್ರತಾಪ್ ತಂದೆ-ತಾಯಿ ದೈವ ಭಕ್ತರಿರಬೇಕು, ಇಲ್ಲಂದ್ರೆ ಕೋತಿ ಅಂತ ಹೆಸರಿಡ್ತಿದ್ರು: ಪ್ರದೀಪ್ ಈಶ್ವರ್

Public TV
2 Min Read

– ಸಿಂಹ ಘರ್ಜಿಸಬೇಕು, ಬಾಯಿ ಬಡಿದುಕೊಳ್ಳಬಾರದು
-ಯತ್ನಾಳ್, ಪ್ರತಾಪ್ ಫೈರ್ ಅಲ್ಲ, ಬಿಜೆಪಿಯವರು ಕಿತ್ತು ಬಿಸಾಡಿರುವ ಪೈರು

ಬೆಂಗಳೂರು: ಮೈಸೂರಿನ ಮಾಜಿ ಸಂಸದ ಪ್ರತಾಪ್ (Pratap Simha) ಅವರ ತಂದೆ ತಾಯಿ ದೈವ ಭಕ್ತರು ಇರಬೇಕು, ಅದಕ್ಕೆ ಪ್ರತಾಪ ಅಂತ ಹೆಸರಿಟ್ಟಿದ್ದಾರೆ. ಇಲ್ಲ ಅಂದರೆ ಕೋತಿ ಅಂತ ಇಡುತ್ತಿದ್ದರು ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಾಪ್ ಅವರಿಗೆ ಅಸ್ತಿತ್ವದ ಕೊರತೆ ಕಾಡುತ್ತಿದೆ. ನಾನು ಅವರಿಗೆ ಸಿಂಹ ಅನ್ನಲ್ಲ, ಸಿಂಹ ಘರ್ಜಿಸಬೇಕು, ಬಾಯಿ ಬಡಿದುಕೊಳ್ಳಬಾರದು. ಬಿಜೆಪಿಯವರು ಒದ್ದು ಹೊರಗೆ ಹಾಕಿದ್ದಾರಾ ಗೊತ್ತಿಲ್ಲ, ಹೊರಗಂತೂ ಹಾಕಿದ್ದಾರೆ. ಹಿಂದೂ ಧರ್ಮ ನಿಮಗೆ ಅಂತ ಯತ್ನಾಳ್‌ಗೆ, ಪ್ರತಾಪ್ ಸಿಂಹಗೆ ನಿಮ್ಮ ತಾತಾ ಏನು ವಿಲ್ ಬರೆದುಕೊಟ್ಟಿದ್ದಾರ? ನಾನು ಮಾತನಾಡಿದರೆ ಪ್ರತಾಪ್ ಸಿಂಹ ಈಗ ಮೂರನೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತಾರೆ. ನಿಮ್ಮನ್ನ ಯಾರು ಬಯ್ಯಬಾರದು, ನೀವು ಯಾರನ್ನ ಬೇಕಾದರು ಬಯ್ಯಬಹುದಾ? ನಾನು ಮಾತನಾಡಿದರೆ, ಲಕ್ಷ್ಮಣ್ ಮಾತನಾಡಿದರೆ ಸ್ಟೇ ತರುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ದೂರು ಗಲಾಟೆ ಕೇಸ್‌ನಲ್ಲಿ ಬಿಜೆಪಿ ಬೆಂಕಿ ಹಚ್ಚೋ ಕೆಲಸ ಮಾಡ್ತಿದೆ: ಎ.ಎಸ್ ಪೊನ್ನಣ್ಣ

ಪ್ರತಾಪ್‌ಗೆ ಕೆಲಸವಂತೂ ಇಲ್ಲ, ರಾಜ್ಯ ರಾಜಕಾರಣಕ್ಕೆ ಅವರು ಸೂಟ್ ಆಗಲ್ಲ. ಅಷ್ಟು ಅಹಂಕಾರ, ದುರಹಂಕಾರ ಇದ್ರೆ ರಾಜ್ಯ ರಾಜಕಾರಣಕ್ಕೆ ಒಗ್ಗಲ್ಲ. ಮೈಸೂರು ಎಂಪಿಯವರು ಸ್ಥಾನ ಪ್ರತಾಪ್‌ಗೆ ಬಿಟ್ಟು ಕೊಡ್ತಾರಾ, ಖಂಡಿತ ಇಲ್ಲ. ಮೈಸೂರು ಸಂಸ್ಥಾನವನ್ನೂ ಬಿಡಲ್ಲ, ಎಂಪಿ ಸ್ಥಾನವನ್ನೂ ಅವರು ಬಿಡಲ್ಲ. ಯತ್ನಾಳ್ ಹಾಗೂ ಪ್ರತಾಪ್ ಯುಪಿಯಲ್ಲಿ ಚುನಾವಣೆಯಲ್ಲಿ ನಿಲ್ಲುವುದು ಒಳ್ಳೆಯದು. ಪ್ರತಾಪ್ ಸೀತೆಯನ್ನು ನೋಡುವುದಕ್ಕೆ ಅಯೋಧ್ಯೆಗೆ ಹೋಗ್ತಾರೇನೋ, ಆದರೆ ನಾವೆಲ್ಲ ತಂದೆ ತಾಯಿಯಲ್ಲೇ ಶ್ರೀರಾಮಚಂದ್ರನನ್ನು, ಸೀತಾ ಮಾತೆಯನ್ನು ನೋಡುವ ಹಿಂದೂಗಳು ನಾವು. ನಿಮಗಿಂತ ದೊಡ್ಡ ಹಿಂದೂ ಭಕ್ತರು ಹಿಂದೂ ಆರಾಧಕರು ನಾವು. ಹಿಂದೂ ಧರ್ಮದ ಬಗ್ಗೆ ಇಷ್ಟು ಮಾತಾಡ್ತಾರಲ್ಲ, ಎಷ್ಟು ಹಿಂದೂ ದೇವಾಲಯಗಳನ್ನು ಉದ್ಧಾರ ಮಾಡಿದ್ದಾರೆ ಇವರು? ಯತ್ನಾಳ್ ಹಾಗೂ ಪ್ರತಾಪ್ ಫೈರ್ ಅಲ್ಲ, ಬಿಜೆಪಿಯವರು ಕಿತ್ತು ಬಿಸಾಡಿರುವ ಪೈರು ನೀವು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? – ವಿಜಯೇಂದ್ರ ಆತಂಕ

99% ಗಣೇಶ ವಿಸರ್ಜನೆ ಆಗಿದೆ. ಎಲ್ಲೋ ಒಂದೆರಡು ಕಡೆ ಸಮಸ್ಯೆ ಆಗಿದೆ. ತಪ್ಪು ಯಾರು ಮಾಡಿದರು ತಪ್ಪೇ. ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಯಾರು ಮಾಡಿದರು ತಪ್ಪೇ. ಅದಕ್ಕೆ ಧರ್ಮ ಲೇಪನ ಮಾಡುವುದು ಯಾಕೆ? ಅವರನ್ನ ಅರೆಸ್ಟ್ ಮಾಡಿದ್ದೀವಿ ತಾನೆ. ಅವರನ್ನ ಒದ್ದು ಒಳಗೆ ಹಾಕಿದ್ದೇವೆ. ಪ್ರತಾಪ್ ಸಿಂಹ ಹೀಗೆ ಸ್ಟ್ರೈಕ್ ಮಾಡಿದರೆ ಆತನನ್ನು ಒದ್ದು ಒಳಗೆ ಹಾಕುತ್ತೇವೆ. ಕಾನೂನು ಕೈಗೆ ತಗೆದುಕೊಂಡರೆ ಪ್ರತಾಪ್ ಆದರೇನು, ಯತ್ನಾಳ್ ಆದರೇನು, ಅವರ ಅಪ್ಪ ಆದರೇನು, ಅವರ ಅಜ್ಜ ಆದರೇನು ಒದ್ದು ಒಳಗೆ ಹಾಕುತ್ತೇವೆ. ಲಾ ಅಂಡ್ ಆರ್ಡರ್ ಕಂಟ್ರೋಲ್‌ಗೆ ಬರುವಾಗ ಇವರು ಹೋಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಾನು ಯತ್ನಾಳ್‌ಗೆ ಬಹಿರಂಗ ಸವಾಲು ಹಾಕುತ್ತೇನೆ. ದೇವಸ್ಥಾನಕ್ಕೆ ಬನ್ನಿ ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡೋಣ. ಸುಮ್ಮನೆ ವಿಭೂತಿ ಹಾಕಿಕೊಂಡು ಬರೋದಲ್ಲ ಎಂದು ಸವಾಲೆಸೆದರು. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್‌ಡಿಕೆ

Share This Article