ಸಂಡೂರಿನ ನಾರಿಹಳ್ಳದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ

Public TV
1 Min Read

ಬಳ್ಳಾರಿ: ಸಂಡೂರು ತಾಲೂಕಿನ ನಾರಿಹಳ್ಳದ ತಟದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆಯಾಗಿದೆ.

10ನೇ ಶತಮಾನದ ವಿರುಪಾಕ್ಷ, ವಿಷ್ಣು ಆರಾಧನೆಯ ಶಿಲಾ ಶಾಸನ ಇದಾಗಿದ್ದು, ನಾರಿಹಳ್ಳದ ಬಳಿಯ ಬಂಡಿ ಬಸವೇಶ್ವರ ದೇವರ ಆವರಣದಲ್ಲಿ ಪತ್ತೆಯಾಗಿದೆ. ಶಾಸನದಲ್ಲಿ ಸೂರ್ಯ ಚಂದ್ರ ಶಿವಲಿಂಗ ನಕ್ಷತ್ರಗಳನ್ನ ಕಾಣಬಹುದಾಗಿದೆ.

ಹತ್ತು ಅಡಿ ಎತ್ತರ ಇರುವ ಕಲ್ಲಿನಲ್ಲಿ ಆರು ಸಾಲುಗಳು ಬರೆದಿರುವ ಶಾಸನ ಇದಾಗಿದೆ. ದೇವರ ಆರಾಧನೆ ಹಾಗೂ ಮರುಜನ್ಮ ಮತ್ತು ಮೋಕ್ಷಕ್ಕೆ ಸಂಬಂಧಿಸಿದ ಶಾಸನ ಎನ್ನಲಾಗಿದ್ದು, ಈ ಶಾಸನದ ಕಾಲಾವಧಿ ಉಲ್ಲೇಖವಾಗಿಲ್ಲ‌. ಇದನ್ನೂ ಓದಿ: ಕತಾರ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ನಾಯಕನ ಪುತ್ರ ಸೇರಿ 6 ಮಂದಿ ಬಲಿ ಟಾಪ್‌ ಲೀಡರ್‌ ಪಾರು

ಲಿಪಿಯ ಶೈಲಿ ಹಾಗೂ ದುರ್ಮುಖಿ ಸಂವತ್ಸರ ಮಾರ್ಗಶಿರಾ ಕಾರ್ತಿಕ ಎಂದು ಉಲ್ಲೇಖವಾಗಿರುವುದರಿಂದ  ಇದು 10ನೇ ಶತಮಾನದ್ದು ಎಂದು ಹೇಳಲಾಗುತ್ತಿದೆ. ವಿಜಯನಗರ ತಿರುಗಾಟ ಅಲೆಮಾರಿ ಸಂಶೋಧನಾ ತಂಡದ ಡಾ. ಪ್ರೊಫೆಸರ್ ತಿಪ್ಪೇಸ್ವಾಮಿ, ಡಾ. ಕೃಷ್ಣಗೌಡ ಇವರ ನೇತೃತ್ವದ ತಂಡ ಈ ಶಾಸನ ಪತ್ತೆ ಹಚ್ಚಿದೆ.

Share This Article