ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋರಿಗೆ ಶಾಕ್

Public TV
2 Min Read

ಬೆಂಗಳೂರು: ಇಡ್ಲಿ-ವಡೆ, ಬಿಸಿಬಿಸಿ ಮಸಾಲೆ ದೋಸೆಯಿಂದ ಹಿಡಿದು ಎಲ್ಲವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುವವರಿಗೆ ಡೆಲಿವರಿ ಆ್ಯಪ್‌ಗಳು (Delivery App) ಶಾಕ್ ನೀಡೋಕೆ ಮುಂದಾಗಿವೆ.

ಹೌದು, ಬೆಳಿಗ್ಗೆ ತಿಂಡಿಗೆ ಇಡ್ಲಿ-ವಡೆ, ಬಿಸಿಬಿಸಿ ಮಸಾಲೆ ದೋಸೆಯಿಂದಿಡಿದು ರಾತ್ರಿ ಸೌತ್, ನಾರ್ಥ್ ಮೀಲ್ಸ್, ಚಿಕನ್, ಮಟನ್ ಸೇರಿದಂತೆ ಬೇಕಾದ ಎಲವನ್ನು ಆನ್‌ಲೈನ್‌ನಲ್ಲೇ ಬುಕ್ ಮಾಡ್ಕೊಂಡು ಸವಿಯುತ್ತಿದ್ದಾರೆ. ಅಂತಹ ಸಿಲಿಕಾನ್ ಸಿಟಿ ಜನರಿಗೆ ಆನ್‌ಲೈನ್ ಕಂಪನಿಗಳು ಶಾಕ್ ನೀಡಲು ಮುಂದಾಗಿವೆ. ಅದಲ್ಲದೇ ಹೋಟೆಲ್ ಮಾಲೀಕರು ಕೂಡ ಆನ್‌ಲೈನ್ ಸಂಸ್ಥೆಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.ಇದನ್ನೂ ಓದಿ: ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ – 20 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ

ಡೆಲಿವರಿ ಸಂಸ್ಥೆಗಳು ಗ್ರಾಹಕರಿಗೆ ಶಾಕ್ ನೀಡಲು ಸಜ್ಜಾಗಿದೆ. ಸ್ವಿಗ್ಗಿ, ಜೊಮೊಟೊ ಸೇರಿದಂತೆ ಫುಡ್ ಡೆಲಿವರಿ ಆಪ್‌ಗಳು ಫ್ಲಾಟ್‌ಫಾರಂ ಚಾರ್ಜ್ ಹೆಚ್ಚು ಮಾಡಲು ಮುಂದಾಗಿದೆ. ಈಗಾಗಲೇ ಆನ್‌ಲೈನ್ ಡೆಲಿವರಿ ಆಪ್‌ಗಳು ಡೆಲಿವರಿ ಚಾರ್ಜ್ ಎಂದು ಹಣವನ್ನು ತೆಗೆದುಕೊಳ್ಳುತ್ತಿದ್ದು, ಕಳೆದ ವರ್ಷದಿಂದ ಫ್ಲಾಟ್ ಫಾರಂ ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದರು. 2 ರಿಂದ 3 ರೂ. ಇದ್ದ ದರ ಇದೀಗ 12 ರಿಂದ 15 ರೂ.ವರೆಗೆ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಸ್ವಿಗ್ಗಿ ಫ್ಲಾಟ್‌ಫಾರಂ ಚಾರ್ಜ್ 12 ರೂ., ಜೊಮಾಟೊ 15 ರು.ಗೆ ಏರಿಕೆ ಆಗಲಿದೆ.

ಇನ್ನೂ ಹಬ್ಬಗಳು ಆರಂಭವಾಗಿರುವ ಈ ಹೊತ್ತಿನಲ್ಲಿ ಕಂಪನಿಗಳು ದರ ಹೆಚ್ಚಳ ಮಾಡಿವೆ. ಅಲ್ಲದೆ ಈ ಕಂಪನಿಗಳು ಊಟ, ತಿಂಡಿಯನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ, ಶೇಕಡ 18ರಷ್ಟು ತೆರಿಗೆಯನ್ನು ಸೆಪ್ಟೆಂಬರ್ 22ರಿಂದ ಜಾರಿ ಬರಲಿರುವ ಕಾರಣಕ್ಕೆ ಅದರ ಹೊರೆಯೂ ಗ್ರಾಹಕರ ಮೇಲೆ ಬೀಳಲಿದೆ. ಜೊತೆಗೆ ಸಂಸ್ಥೆಗಳ ಪ್ಲಾಟ್‌ಫಾರಂ ಚಾರ್ಜ್ ಕೂಡ ಹೆಚ್ಚು ಮಾಡ್ತಿದೆ. ಇದಕ್ಕೆ ಹೋಟೆಲ್ ಮಾಲೀಕರು ನಾವು ಆನ್‌ಲೈನ್ ಸಂಸ್ಥೆಗೆ ಮನವಿ ಮಾಡಿದರೂ ಉಪಯೋಗ ಆಗ್ತಿಲ್ಲ, ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿ ಹೋಂ ಡೆಲಿವರಿ ತೆಗೆದುಕೊಳ್ಳಬೇಕಾಗಿತ್ತು. ಈಗ ಅಂತಹ ಸ್ಥಿತಿ ಕೂಡ ಇಲ್ಲ, ಹೋಮ್ ಡೆಲಿವರಿ ಮಾಡಿಸಿಕೊಳ್ಳೊದ್ರಿಂದ ಊಟದ ತಾಜತನ, ಬಿಸಿ ಕೂಡ ಇರೋಲ್ಲ, ಹೋಟೆಲ್‌ಗೆ ಬನ್ನಿ, ಅಲ್ಲೇ ಊಟ ಮಾಡಿ, ಹಣ ಕೂಡ ಉಳಿಸಿಕೊಳ್ಳಿ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಫ್ಲಾಟ್‌ಫಾರಂ ಚಾರ್ಜ್ ಹೆಸರಲ್ಲಿ ಕಳೆದ ವರ್ಷದಿಂದ ಗ್ರಾಹಕರಿಗೆ ಕಡಿಮೆ ಪ್ರಮಾಣದಲ್ಲಿ ಹೊರೆ ಹಾಕಲು ಮುಂದಾಗಿದ್ದ ಈ ಆನ್‌ಲೈನ್ ಕಂಪನಿಗಳು, ಇದೀಗ ದೊಡ್ಡಮಟ್ಟದಲ್ಲಿ ಹೊರೆ ಹಾಕಲು ಮುಂದಾಗಿವೆ. ಇದರಿಂದ ಗ್ರಾಹಕರು ಮಾತ್ರವಲ್ಲ, ಹೋಟೆಲ್ ಮಾಲೀಕರು ಕೂಡ ಆಕ್ರೋಶ ವ್ಯಕ್ತಪಡಸ್ತಿದ್ದಾರೆ.ಇದನ್ನೂ ಓದಿ: ನೇಪಾಳ ಪ್ರಧಾನಿ ಹುದ್ದೆ ರೇಸಲ್ಲಿ ಕರ್ನಾಟಕದ ಎಂಟೆಕ್ ಪದವೀಧರ

Share This Article