ಹೃತಿಕ್ ನಟನೆಯ ಜೊತೆಗೆ ನಿರ್ದೇಶನ ಕ್ರಿಶ್-4 ಹೇಗಿರಲಿದೆ ಗೊತ್ತಾ..?

Public TV
1 Min Read

ಕ್ರಿಶ್ ಸರಣಿಯ ಸಿನಿಮಾದಲ್ಲಿ ನಟ ಹೃತಿಕ್ ರೋಷನ್ (Hrithik Roshan) ನಟಿಸುತ್ತಾ ಬಂದಿದ್ದಾರೆ. ಅವರ ತಂದೆ ರಾಕೇಶ್ ರೋಷನ್ (Rakesh Roshan) ಸಿನಿಮಾಗೆ ನಿರ್ದೇಶನವನ್ನ ಮಾಡುತ್ತಿದ್ದರು. ಈ ಬಾರಿ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನ ಕೂಡಾ ನಟ ಹೃತಿಕ್ ರೋಷನ್ ನಿಭಾಯಿಸಲಿದ್ದಾರಂತೆ. ಇದಕ್ಕಾಗಿ ಭರ್ಜರಿಯಾಗಿ ತಯಾರಿಗಳು ನಡೆಯುತ್ತಿವೆ. ಈ ಸಿನಿಮಾ ಈ ವರ್ಷದಲ್ಲಿ ಪ್ರಾರಂಭವಾಗಿ 2027ರಲ್ಲಿ ತೆರೆಗೆ ಬರುವ ಪ್ರಯತ್ನಗಳು ನಡೆಯುತ್ತಿವೆಯಂತೆ.

3 ಸಿರೀಸ್ ಸಿನಿಮಾಗಳ ನಿರ್ದೇಶನ ಮಾಡಿದ ರಾಕೇಶ್ ರೋಷನ್ ಆರೋಗ್ಯ ಸರಿಯಿಲ್ಲ. ಹೀಗಾಗಿ ಕ್ರಿಶ -4 (Krrish 4) ಸಿನಿಮಾದ ಜವಾಬ್ದಾರಿಯನ್ನ ಗ್ರೀಕ್ ಗಾಡ್ ಹೃತಿಕ್ ರೋಷನ್ ತೆಗೆದುಕೊಂಡಿದ್ದಾರೆ. ಇನ್ನು ಹೃತಿಕ್ ರೋಷನ್ ತಮ್ಮ ತಂದೆಯ ಜೊತೆ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಂದೆಯನ್ನ ಮೀರಿಸುವಂತಹ ನಿರ್ದೇಶಕರಾಗುವ ಯಾವ ಸಂದೇವೂ ಇಲ್ಲ ಎನ್ನುವ ಮಾತುಗಳು ಬಾಲಿವುಡ್‍ನಲ್ಲಿ ಕೇಳಿ ಬರುತ್ತಿವೆ. ಇದನ್ನೂ ಓದಿ: ಸೂಪರ್ ಹಿಟ್ ಅವರಾಪನ್ ಚಿತ್ರದ ಸಿಕ್ವೇಲ್ – ಇಮ್ರಾನ್ ಹಶ್ಮಿಗೆ ದಿಶಾ ಪಟಾನಿ ನಾಯಕಿ

ಹೃತಿಕ್ ರೋಷನ್ ತಂದೆ ರಾಕೇಶ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಿನಿಮಾದ ಪ್ಲ್ಯಾನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಸಿನಿಮಾ ಶೂಟಿಂಗ್, ನಿರ್ದೇಶನಕ್ಕೆ ಹೃತಿಕ್ ಮಾಡಿಕೊಳ್ಳುತ್ತಿರುವ ತಯಾರಿ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಸದ್ಯ ವಾರ್-2 ಸಿನಿಮಾ ರಿಲೀಸ್ ಆಗಿದ್ದು, ಇದೀಗ ಹೃತಿಕ್ ರೋಷನ್ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗುವ ಬಗ್ಗೆ ರಾಕೇಶ್ ರೋಷನ್ ಹೇಳಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 – ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಗೆ ಸಿದ್ಧ

Share This Article