2007ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಬಾಲಿವುಡ್ನ ಅವರಾಪನ್ ಸಿನಿಮಾ ಪಾರ್ಟ್-2ಗೆ (Awarapan 2) ಸಿದ್ಧತೆ ನಡೆದಿದೆ. ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿಗೆ (Emraan Hashmi) ನಾಯಕಿಯಾಗಿ ಈ ಬಾರಿ ದಿಶಾ ಪಟಾನಿ (Disha Patani) ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ ತಂಡ ರೆಡಿಯಾಗಿದ್ದು, ಸಿನಿಮಾ ಇದೇ ತಿಂಗಳ ಅಂತ್ಯದೊಳಗೆ ಶೂಟಿಂಗ್ ಶುರುಮಾಡುವ ಎಲ್ಲಾ ತಯಾರಿಯನ್ನ ಮಾಡಿಕೊಳ್ಳಲಾಗಿದೆಯಂತೆ.
ಅವರಾಪನ್ ಸಿನಿಮಾದ ಮೊದಲ ಭಾಗದಲ್ಲಿ ನಟ ಇಮ್ರಾನ್ ಹಶ್ಮಿಗೆ ನಾಯಕಿಯಾಗಿ ಶ್ರಿಯಾ ಶರಣ್ ಹಾಗೂ ಮೃಣಾಲಿನಿ ಶರ್ಮಾ ನಟಿಸಿದ್ದರು. ಇನ್ನು ಮೋಹಿತ್ ಸೂರಿ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ನಿತೀನ್ ಕಕ್ಕರ್ ನಿರ್ದೇಶಕ ಕ್ಯಾಪ್ ಹಾಕಲಿದ್ದು, ಇಮ್ರಾನ್ ಹಶ್ಮಿ ಈ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇಮ್ರಾನ್ಗೆ ನಾಯಕಿಯಾಗಿ ಬಾಲಿವುಡ್ ಬ್ಯೂಟಿ ದಿಶಾ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಬೆಡ್ರೂಮಲ್ಲಿ ಬಿಕಿನಿ ತೊಟ್ಟು ಸೆಲ್ಫಿ ಕ್ಲಿಕ್ಕಿಸಿದ ನಟಿ – ದಿಶಾ ಪಟಾನಿ ಮೈಮಾಟಕ್ಕೆ ಪಡ್ಡೆ ಹುಡುಗರು ಬೋಲ್ಡ್
ಮುಖೇಶ್ ಭಟ್ ಈ ಸಿನಿಮಾಗೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಅವರಾಪನ್ ಸಿನಿಮಾದ ಮೂಲಕ ಕೋಟಿ ಕೋಟಿ ಬಾಚಿಕೊಂಡ ನಿರ್ಮಾಪಕ ಈ ಬಾರಿ ಬಹುಕೋಟಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಇಮ್ರಾನ್ ಹಶ್ಮಿ ಅಂದ್ಮೇಲೆ ಹಸಿಬಿಸಿ ದೃಶ್ಯಗಳಿಗೇನು ಕಮ್ಮಿ ಇರೋದಿಲ್ಲ. ಶೀಘ್ರದಲ್ಲೇ ಶೂಟಿಂಗ್ ಆರಂಭಿಸಿ, ಮುಂದಿನವರ್ಷ ಸಿನಿಮಾವನ್ನ ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇದನ್ನೂ ಓದಿ: ಹಾಲಿವುಡ್ನತ್ತ ಹೊರಟ ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾನಿ!