ಬೆಂಗಳೂರು: ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಮತ್ತೆ ಭಾರತೀಯನಾಗಿ ಹುಟ್ಟಬೇಕು ಅನ್ನೋದು ನನ್ನಾಸೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.
ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಮುಂದಿನ ಜನ್ಮದಲ್ಲಿ ಮುಸ್ಲಿಂರಾಗಿ ಹುಟ್ಟಬೇಕು ಶಾಸಕ ಸಂಗಮೇಶ್ (BK Sangamesh) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಶಾಸಕರ ಆಸೆ ಬಗ್ಗೆ ಅವರನ್ನು ಹೋಗಿ ಕೇಳಿ, ಅದು ನನಗೆ ಗೊತ್ತಿಲ್ಲ. ನಾನು ಮಾತ್ರ ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕು, ಭಾರತೀಯನಾಗಿ ಹುಟ್ಟಬೇಕು ಅನ್ನೋದು ನನ್ನಾಸೆ. ಅವರಿಗೆ ಆ ರೀತಿ ಅಸೆ ಇದ್ದರೆ ಅವರು ಉತ್ತರಿಸಲಿ ಎಂದರು. ಇದನ್ನು ಓದಿ: ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು: `ಕೈ’ ಶಾಸಕ ಸಂಗಮೇಶ್
ಹಿಂದೆ ಮಾಜಿ ಪ್ರಧಾನ ಮಂತ್ರಿಗಳು ಏನು ಹೇಳಿದ್ರು ಗೊತ್ತಾ? ಎಂದು ಪರೋಕ್ಷವಾಗಿ ದೇವೇಗೌಡರ (H.D Devegowda) ಹೆಸರು ಹೇಳದೇ ಅವರ ಮಾತಿನ ಬಗ್ಗೆ ಪ್ರಸ್ತಾಪಿಸಿದರು. ನಾನು ಈಗ ಅವರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಅವರವರ ಆಯ್ಕೆ ಅವರವರಿಗೆ ಬಿಡಬೇಕು. ಅದು ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಕಾಂಗ್ರೆಸ್ ಸರ್ಕಾರ ಬಂದಾಗಲೇ ಭದ್ರಾವತಿಯ ರೀತಿಯ ಘಟನೆಗಳು ನಡೆಯುತ್ತವೆ ಎಂಬ ಬಿಜೆಪಿ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ಉತ್ತರ ಕೊಡೋಕೆ ನಾನು ಮಿನಿಸ್ಟರ್ ಆಗಿಲ್ಲ. ಸರ್ಕಾರದ ಕುಮ್ಮಕ್ಕಿನಿಂದ ಬಿಜೆಪಿಯವರು ಹೇಳ್ತಾರಾ? ತಪ್ಪು ಮಾಡಿದಾಗ ಶಿಕ್ಷೆ ಆದಾಗ ಕಾನೂನು ಇದೆ. ಬಿಜೆಪಿಯವರು ಏನು ಹೇಳ್ತಾರೆ ಅಂತ ಅದಕ್ಕೆ ಉತ್ತರ ಕೊಡೋಕೆ ನಾನಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ; 12 ಸೆಕೆಂಡ್ ವೀಡಿಯೋ ಪರಿಶೀಲಿಸಿ ಕ್ರಮ: ಮಧು ಬಂಗಾರಪ್ಪ