ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಡಬಲ್ ಗುಡ್‌ನ್ಯೂಸ್ – ಇದೇ 15ಕ್ಕೆ ಟ್ರ್ಯಾಕಿಗಿಳಿಯಲಿದೆ ನಾಲ್ಕನೇ ರೈಲು

Public TV
2 Min Read

– ಇದೇ ತಿಂಗಳಾಂತ್ಯಕ್ಕೆ ಮತ್ತೊಂದು ರೈಲು ಕೂಡ ಆಗಮನ ಸಾಧ್ಯತೆ

ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದ್ದು, ಇದೇ ಸೆ.15ಕ್ಕೆ ನಾಲ್ಕನೇ ಮೆಟ್ರೋ ಟ್ರ್ಯಾಕಿಗಿಳಿಯಲಿದೆ. ಈ ಮೂಲಕ ಪ್ರಯಾಣಿಕರು ಕಾಯುವ ಸಮಸ್ಯೆ ಕಡಿಮೆಯಾಗಲಿದೆ.

ಯೆಲ್ಲೋ ಲೈನ್ (Yellow Line) ಮೆಟ್ರೋ ಆರಂಭವಾದರೂ ಕೂಡ ಈ ಭಾಗದ ಪ್ರಯಾಣಿಕರಿಗೆ ಸಮಸ್ಯೆ ತಪ್ಪಿರಲಿಲ್ಲ. ಕಡಿಮೆ ಸಂಖ್ಯೆಯ ಟ್ರೈನ್‌ಗಳ ಓಡಾಟದಿಂದಾಗಿ ಪ್ರಯಾಣಿಕರು ಕಾಯುವಂತಾಗಿತ್ತು. ಕಳೆದೊಂದು ತಿಂಗಳಿನಿಂದ ಕಷ್ಟನೋ, ಸುಖನೋ ಹೇಗೋ ಅಡ್ಜೆಸ್ಟ್ ಮಾಡಿಕೊಂಡು ಓಡಾಟ ಮಾಡುತ್ತಿದ್ದವರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.ಇದನ್ನೂ ಓದಿ: ಇಂದಿನಿಂದ ಏಷ್ಯಾಕಪ್‌| ಭಾರತ – ಪಾಕ್‌ ಮೂರು ಬಾರಿ ಮುಖಾಮುಖಿ?

ಹೌದು. ಕಳೆದ ತಿಂಗಳು ಆ.10ರಂದು ಮಾರ್ಗ ಓಪನ್ ಆದರೂ, ಈ ಭಾಗದ ಪ್ರಯಾಣಿಕರು ಉಳಿದ ಮಾರ್ಗದ ಪ್ರಯಾಣಿಕರಂತೆ ಪೂರ್ಣಪ್ರಮಾಣದಲ್ಲಿ ಸಂಚಾರ ಮಾಡೋಕೆ ಸಾಧ್ಯ ಆಗಿರಲಿಲ್ಲ. ಒಂದು ಟ್ರೈನ್‌ನಿಂದ ಮತ್ತೊಂದು ಟ್ರೈನ್ ಓಡಾಟ ನಡುವಿನ ಸಮಯ 25 ನಿಮಿಷಗಳ ಗ್ಯಾಪ್ ಇತ್ತು. ಇದರಿಂದಾಗಿ ಪ್ರಯಾಣಿಕರು ಹೆಚ್ಚು ಕಾಯಬೇಕಿತ್ತು. ಜೊತೆಗೆ ಜನಸಂದಣಿ ಕೂಡ ಉಂಟು ಮಾಡಿತ್ತು. ಸದ್ಯ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೊನೆಗೂ ನಾಲ್ಕನೇ ರೈಲು ಇದೇ 15ರಿಂದ ಟ್ರ‍್ಯಾಕ್‌ಗೆ ಇಳಿಯಲಿದೆ.

ಈ ಬಗ್ಗೆ ಖುದ್ದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, ಈ ಸಂಬಂಧ ಎಲ್ಲಾ ಸಿದ್ಧತೆಗಳು ಕೂಡ ಆರಂಭವಾಗಿದೆ. ಸದ್ಯ ಈ ಟ್ರೈನ್ ಓಡಾಟ ಆರಂಭವಾದರೆ ಸದ್ಯ 25 ನಿಮಿಷ ಇರುವ ಟ್ರೈನ್‌ಗಳ ನಡುವಿನ ಓಡಾಟದ ಸಮಯ 15 ನಿಮಿಷಕ್ಕೆ ಇಳಿಕೆ ಸಾಧ್ಯತೆ ಇದೆ.

ಇನ್ನೂ ನಾಲ್ಕನೇ ಟ್ರೈನ್ ಗುಡ್ ನ್ಯೂಸ್ ಜೊತೆಗೆ, ಇದೇ ತಿಂಗಳ ಅಂತ್ಯಕ್ಕೆ ಮತ್ತೊಂದು ಟ್ರೈನ್ ಸೆಟ್ ಕೂಡ ಬೆಂಗಳೂರು ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಟ್ರೈನ್ ಪೂರೈಕೆ ಮಾಡುತ್ತಿರುವ ರೈಲು ತಯಾರಿಕಾ ಸಂಸ್ಥೆ ಟಿಟಿಗರ್ ಕೂಡ ಸಪ್ಲೈ ಮಾಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಒಂದೊಮ್ಮೆ ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ಎರಡು ಅಥವಾ ಮೂರನೇ ವಾರಕ್ಕೆ ಐದನೇ ಟ್ರೈನ್ ಕೂಡ ಟ್ರ‍್ಯಾಕ್‌ಗೆ ಇಳಿದು ಸಂಚಾರ ಆರಂಭಿಸುವ ಸಾಧ್ಯತೆ ಇದೆ.ಇದನ್ನೂ ಓದಿ:  ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು

Share This Article