ಕೋಲ್ಕತ್ತಾ: 8 ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಬಾಲಕನ ಕುಟುಂಬಸ್ಥರು ದಂಪತಿಯನ್ನು ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.
ಉತ್ಪಲ್ ಬಿಸ್ವಾಸ್, ಪತ್ನಿ ಸೋಮ ಬಿಸ್ವಾಸ್ ಮೃತ ದಂಪತಿ. ಸ್ವರ್ಣಭ್ ಮಂಡಲ್ ಎಂಬ ಬಾಲಕ ಶುಕ್ರವಾರ ಆಟವಾಡಲು ಹೋಗುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದ. ಆತನ ಮನೆಯವರು ಸುತ್ತಮುತ್ತ ಹುಡುಕಾಡಿದರೂ ಬಾಲಕ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ಅತ್ಯಾಚಾರ – ಹೆರಿಗೆಯಾದ ಅರ್ಧ ಗಂಟೆಯಲ್ಲೇ ಮಗು ಸಾವು
ಬಳಿಕ ಬಾಲಕ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ಬಾಲಕನ ಮೃತದೇಹವು ಹತ್ತಿರದ ಕೆರೆಯಲ್ಲಿ ಟಾರ್ಪಲ್ನಿಂದ ಸುತ್ತಿದ್ದ ರೀತಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಬಾಲಕ ಕುಟುಂಬಸ್ಥರು ಕೆರೆಯ ಪಕ್ಕದಲ್ಲೇ ಇರುವ ಮನೆಯ ಉತ್ಪಲ್ ಹಾಗೂ ಆತನ ಪತ್ನಿ ಸೇರಿ ಸ್ವರ್ಣಭ್ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಾಹುಗ್ರಸ್ತ ರಕ್ತಚಂದ್ರಗ್ರಹಣ – ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟು, ಬಾಲಕನ ಕುಟುಂಬಸ್ಥರು ಉತ್ಪಲ್ ಮನೆ ಮೇಲೆ ದಾಳಿ ಮಾಡಿ, ಆತನಿಗೆ ಹಾಗೂ ಆತನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಂಭೀರ ಗಾಯಗೊಂಡ ದಂಪತಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ಪ್ರಾಥಮಿಕ ವರದಿಯಲ್ಲಿ ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.