ಬೆಂಗಳೂರಿನಲ್ಲಿ ಕಾರ್ ಡ್ರೈವರ್‌ನ ಭೀಕರ ಕೊಲೆ – ಸ್ನೇಹಿತರಿಂದಲೇ ಹತ್ಯೆ ಶಂಕೆ

Public TV
1 Min Read

ಬೆಂಗಳೂರು: ಕಾರ್ ಡ್ರೈವರ್‌ನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ (Bapujinagara) ನಡೆದಿದೆ.

ಕೌಶಿಕ್ (25 ) ಕೊಲೆಯಾದ ದುರ್ದೈವಿ. ಮೃತ ಕೌಶಿಕ್ ಬ್ಯಾಟರಾಯನಪುರದಲ್ಲಿ ರೌಡಿಶೀಟರ್ ಆಗಿದ್ದ. 2020ರಲ್ಲಿ ಕೊಲೆ ಕೇಸ್ ಒಂದರಲ್ಲಿ ಕೌಶಿಕ್ ಎ8 ಆರೋಪಿಯಾಗಿ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೂಲಕ ಹೊರಬಂದು, ಕ್ಯಾಬ್ ಓಡಿಸಿಕೊಂಡು ಜೀವನ ಸಾಗಿಸ್ತಿದ್ದ. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನಿಗೆ ಕಲ್ಲು – ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌

 ಭಾನುವಾರ ರಾತ್ರಿ ಕೌಶಿಕ್, ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವೇಳೆ ಜಗಳ ನಡೆದಿದೆ. ಬಳಿಕ ಜೊತೆಯಲ್ಲಿದ್ದ ಸ್ನೇಹಿತರೇ ಕೌಶಿಕ್‌ನನ್ನು ಹತ್ಯೆಗೈದಿದ್ದಾರೆ ಎನ್ನಲಾಗುತ್ತಿದೆ. ಮಧ್ಯರಾತ್ರಿ 2:30ರ ಸುಮಾರಿಗೆ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ದೇಶ ಕಾಯೋ ಯೋಧನಿಂದಲೇ ಕೊಲೆ – ಡೀಸೆಲ್‌ ಸುರಿದು ಸಹೋದರನ ಹತ್ಯೆಗೈದ ಮೂವರು ಅರೆಸ್ಟ್

ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article