ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ; ಚಿಗುರಿದ ಪ್ರವಾಸೋದ್ಯಮ

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪರಿಸರ ಪ್ರವಾಸೋದ್ಯಮದಲ್ಲಿ ಒಂದಾದ ದಾಂಡೇಲಿ (Dandeli) ಪ್ರವಾಸೋದ್ಯಮ ಮತ್ತೆ ಚಿಗುರೊಡೆದಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಮಳೆಗಾಲದಲ್ಲಿ ನಿಷೇಧ ಹೇರಿದ್ದ ಜಲಸಾಹಸ ಕ್ರೀಡೆಗಳಿಗೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದು, ಪ್ರಕೃತಿ ಪ್ರಿಯರಿಗೆ, ಜಲಸಾಹಸಿಗಳಿಗೆ ದಾಂಡೇಲಿ ತೆರೆದುಕೊಂಡಿದೆ.

ದಾಂಡೇಲಿಯಲ್ಲಿ ಯಾವೆಲ್ಲ ಚಟುವಟಿಕೆಗಳಿವೆ?
ವೈಟ್ ವಾಟರ್ ರಾಫ್ಟಿಂಗ್

ಕಾಳಿ ನದಿಯ ಸುಂದರ ತಾಣವಾದ ಜೋಯಿಡಾದ ಗಣೇಶ ಗುಡಿ ಬಳಿಯ ನದಿ ಭಾಗದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವೈಟ್ ವಾಟರ್ ರಾಫ್ಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದೆ. ಕಾಳಿ ನದಿಯ ನೀರು ಶಾಂತವಾಗಿ ಹರಿದು ಕಲ್ಲು ಬಂಡೆಯ ಮೇಲೆ ದುಮ್ಮಿಕ್ಕಿ ಜಾರುಬಂಡಿಯಂತೆ ನದಿಯ ನೀರು ಹರಿಯುತ್ತದೆ. ಈ ಭಾಗದಲ್ಲಿ ರಾಫ್ಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದು, ಇಲ್ಲಿ ರಾಫ್ಟರ್‌ನಲ್ಲಿ ಹುಟ್ಟುಗಳನ್ನು ಹಾಕುತ್ತಾ ಹೋಗುವುದೇ ಮನಮೋಹಕ. ಇಲ್ಲಿ ನದಿಯ ನೀರು ಹಾಲಿನ ನೊರೆಯಂತೆ ತನ್ನ ಬಣ್ಣ ಬದಲಿಸಿ ಹರಿಯುತ್ತದೆ. ಇದನ್ನೂ ಓದಿ: ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

ಕಯಾಕಿಂಗ್, ಬೋಟಿಂಗ್‌ಗೆ ಅವಕಾಶ
ಸದ್ಯ ಮಳೆಯಿಂದ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿರುವ ಕಾಳಿ ನದಿ ಕಯಾಕಿಂಗ್ ಹಾಗೂ ಬೋಟಿಂಗ್ ಮಾಡಲು ಹೇಳಿಮಾಡಿಸಿದ ಸಮಯ. ಇಲ್ಲಿನ ಪರಿಸರ ವೀಕ್ಷಣೆಗೆ ಕಯಾಕಿಂಗ್ ಹಾಗೂ ಬೋಟಿಂಗ್ ಮಾಡುತ್ತಾ ನಿಸರ್ಗದ ಪರಿಸರವನ್ನು ವೀಕ್ಷಿಸಲು ಪ್ರವಾಸೋದ್ಯಮ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಇದಲ್ಲದೇ ದಾಂಡೇಲಿ, ಜೋಯಿಡಾ ಭಾಗದಲ್ಲಿ ಜಿಪ್‌ಲೈನ್‌, ಟ್ರಕ್ಕಿಂಗ್, ಜಂಗಲ್ ಸಫಾರಿ, ಕವಳೆ ಗುಹೆಗಳ ವೀಕ್ಷಣೆ, ಹಾರ್ನಬಿಲ್ ಪಕ್ಷಿಗಳ ವೀಕ್ಷಣೆ, ಸಿಂಥೇರಿ ರಾಕ್, ಮೊಸಳೆ ಪಾರ್ಕ್‌ಗಳನ್ನು ವೀಕ್ಷಿಸಬಹುದು. ವೀಕೆಂಡ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದರಿಂದ ವೀಕ್‌ಡೇಸ್‌ನಲ್ಲಿ ಇಲ್ಲಿಗೆ ಬರುವುದು ಉತ್ತಮ. ಇದನ್ನೂ ಓದಿ: ಮತಗಳ್ಳತನ ಆಗಿದ್ರೆ ರಾಜೀನಾಮೆ ನೀಡಲಿ, ಬ್ಯಾಲೆಟ್ ಪೇಪರ್‌ನಿಂದ ಚುನಾವಣೆ ನಡೆಸಿ ಅಧಿಕಾರಕ್ಕೆ ಬರಲಿ: ಕಾರಜೋಳ

ವಸತಿಗಾಗಿ ಹಲವು ಹೋಮ್ ಸ್ಟೇ ,ರೆಸಾರ್ಟ್‌ಗಳು ಇದ್ದು, ಒಂದೊಂದು ಭಾಗದಲ್ಲಿ ಒಂದೊಂದು ದರವಿದೆ. ಜೋಯಿಡಾ ಭಾಗದಲ್ಲಿ ಅಲ್ಪ ದರಗಳು ದಾಂಡೇಲಿಗೆ ಹೋಲಿಸಿದಲ್ಲಿ ಕಡಿಮೆಯಿದ್ದು, ಈ ಭಾಗವನ್ನು ತಂಗಲು ಆಯ್ಕೆ ಮಾಡಿಕೊಳ್ಳಬಹುದು. ಸದ್ಯ ಜಿಲ್ಲಾಡಳಿತ ಜಲಸಾಹಸ ಕ್ರೀಡೆಗೆ ಅನುಮತಿ ನೀಡಿದ್ದರಿಂದ ಪ್ರವಾಸೋದ್ಯಮ ಚಿಗುರೊಡೆದಿದೆ.

Share This Article