ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ

By
1 Min Read

ಉಡುಪಿ: ಚಂದ್ರಗ್ರಹಣ (Chandra Grahan) ಇರುವುದರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ (Udupi Krishna Mutt) ಪೂಜೆ ಪುನಸ್ಕಾರ, ಅನ್ನಪ್ರಸಾದ ವಿಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

10:30ಕ್ಕೆ ಕೃಷ್ಣಮಠದಲ್ಲಿ ಭೋಜನ ವ್ಯವಸ್ಥೆ ಆರಂಭವಾಗಲಿದ್ದು, ಊಟ 12 ಗಂಟೆಗೆ ಮುಕ್ತಾಯವಾಗುತ್ತದೆ. ಮಠದಲ್ಲಿ ಗ್ರಹಣ ಶಾಂತಿ ಹೋಮ-ಹವನಗಳ ವ್ಯವಸ್ಥೆ ಇರಲಿದೆ. ಗ್ರಹಣ ಆರಂಭಕ್ಕೂ ಮೊದಲು ನೈರ್ಮಲ್ಯ ವಿಸರ್ಜನ ಪೂಜೆ ನಡೆಯಲಿದೆ. ಇದನ್ನೂ ಓದಿ: ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

ಗ್ರಹಣ ಸ್ಪರ್ಶಕಾಲ ಮಧ್ಯಕಾಲ ಮತ್ತು ಮೋಕ್ಷಕಾಲದಲ್ಲಿ ಮಧ್ವ ಸರೋವರದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡುವ ವ್ಯವಸ್ತೆ ಕಲ್ಪಿಸಲಾಗಿದೆ. ಚಂದ್ರಗ್ರಹಣ ಆರಂಭಕ್ಕೂ ಮೊದಲು ರಾತ್ರಿ ಪೂಜೆ ನಡೆದು ಅಲಂಕಾರಗಳನ್ನೆಲ್ಲ ತೆಗೆದು ನೈರ್ಮಲ್ಯ ವಿಸರ್ಜನ ಪೂಜೆ ನಡೆಸಲಾಗುತ್ತದೆ.

Share This Article