ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಸಹೋದರಿ ಅಲೀಮಾ ಖಾನಮ್ ಅವರ ಮೇಲೆ ರಾವಲ್ಪಿಂಡಿಯ ಅಡಿಯಾಲ ಜೈಲಿನ ಹೊರಗೆ ಮೊಟ್ಟೆ ಎಸೆದ ಘಟನೆ ನಡೆದಿದೆ.
ಮೊಟ್ಟೆ ಆಕೆಯ ಮುಖಕ್ಕೆ ಹೊಡೆದು, ಬಟ್ಟೆಯ ಮೇಲೆ ಬಿದ್ದ ದೃಶ್ಯಾವಳಿಯ ವೀಡಿಯೋ ವೈರಲ್ ಆಗಿದೆ. ಈ ಘಟನೆಯಿಂದ ಇಮ್ರಾನ್ ಖಾನ್ ಸಹೋದರಿ ಬೇಸರಗೊಂಡಿದ್ದಾರೆ. ಖಾನಮ್ ಮೇಲೆ ಮೊಟ್ಟೆ ಎಸೆದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರಾಗಿದ್ದಾರೆ. ಇದನ್ನೂ ಓದಿ: ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ
ಪಿಟಿಐ ಬೆಂಬಲಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ. ಇಂತಹ ನಡವಳಿಕೆಯು ಅನೈತಿಕ ಮಾತ್ರವಲ್ಲ, ದುರದೃಷ್ಟಕರವೂ ಆಗಿದೆ. ರಾಜಕೀಯ ಭಿನ್ನಾಭಿಪ್ರಾಯ ಇರುವವರನ್ನು ಅಪಮಾನಿಸುವುದು ಸರಿಯಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಮತ್ತೊಬ್ಬರು ಪೋಸ್ಟ್ ಹಾಕಿ, ಈ ಅವಮಾನಕರ ಕೃತ್ಯವನ್ನು ಅಸಿಮ್ ಮುನೀರ್ ಮತ್ತು ನೂನ್ ಲೀಗ್ ಮಾಡಿದ್ದಾರೆ. ಈ ಜನರು ಖಾನ್ ಮತ್ತು ಅವರ ಕುಟುಂಬಕ್ಕೆ ತುಂಬಾ ಹೆದರುತ್ತಾರೆ ಎಂದು ಹೇಳಿದ್ದಾರೆ.
ತೋಷಖಾನಾ ಅಥವಾ ನಿಧಿ ಗೃಹ ಎಂಬ ಸರ್ಕಾರಿ ಸ್ವಾಮ್ಯದ ಇಲಾಖೆಯಲ್ಲಿ ಇರಿಸಲಾದ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಖರೀದಿಸಿ ಮಾರಾಟ ಮಾಡಿದ ಆರೋಪ ಇಮ್ರಾನ್ ಖಾನ್ ಮೇಲಿದೆ. ತೋಷಖಾನಾದಲ್ಲಿ ಪ್ರಧಾನ ಮಂತ್ರಿಗಳು, ಅಧ್ಯಕ್ಷರು, ಮಂತ್ರಿಗಳು, ಸಂಸತ್ ಸದಸ್ಯರು ಮತ್ತು ಇತರ ಸರ್ಕಾರಿ ಅಧಿಕಾರಿಗಳು ಸ್ವೀಕರಿಸಿದ ಉಡುಗೊರೆಗಳನ್ನು ಸಂಗ್ರಹಿಸಲಾಗುತ್ತದೆ. ಇದನ್ನೂ ಓದಿ: ಟೆಕ್ ದಿಗ್ಗಜರಿಗೆ ಟ್ರಂಪ್ ಡಿನ್ನರ್ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ
2023 ರ ಆಗಸ್ಟ್ನಲ್ಲಿ 140 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಉಡುಗೊರೆ ವಸ್ತುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಇಮ್ರಾನ್ ಖಾನ್ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ವಿರುದ್ಧದ ತೋಷಖಾನಾ ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಲಾಗಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ನಿಗದಿಪಡಿಸಲಾಗಿದೆ.