ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಆರೋಪ – ಎಸ್‌ಎಎಫ್ ಪೊಲೀಸ್ ಕಾನ್‌ಸ್ಟೆಬಲ್ ಅರೆಸ್ಟ್

By
1 Min Read

ಬೆಂಗಳೂರು: ವಕೀಲೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎಸ್‌ಎಎಫ್‌ನ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಬಸವೇಶ್ವರ ನಗರ ಪೊಲೀಸರು (Basaveshwar Nagar Police) ಬಂಧಿಸಿದ್ದಾರೆ.

ಬಾಗಲಕೋಟೆಯ ಜಮಖಂಡಿ ಮೂಲದ ಸಿದ್ದೇಗೌಡ ಅಲಿಯಾಸ್ ಸಿದ್ದು ಬಂಧಿತ ಕಾನ್‌ಸ್ಟೆಬಲ್‌ ಎಂದು ಗುರುತಿಸಲಾಗಿದೆ. ಸಿದ್ದೇಗೌಡ ಮಂಗಳೂರಿನ ಪಾಂಡೇಶ್ವರದಲ್ಲಿನ ಸ್ಪೆಷಲ್ ಆಕ್ಷನ್ ಫೋರ್ಸ್‌ನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಕಾರ್ಯನಿರ್ವಹಿಸುತ್ತಿದ್ದ. ಇದನ್ನೂ ಓದಿ: ಭೀಮಾತೀರದ ಗ್ರಾಪಂ ಅಧ್ಯಕ್ಷನ ಕೊಲೆ ಕೇಸ್;‌ ಚಡಚಣ ಪಿಎಸ್‌ಐ ಅಮಾನತು

ಬೆಂಗಳೂರಿನಲ್ಲಿ (Bengaluru) ವಕೀಲೆಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ತನ್ನ ಕಾರಿಗೆ ಸೈಡ್‌ ಬಿಡಲಿಲ್ಲ ಅಂತ ಬಸ್‌ ಚಾಲಕನ ಮೇಲೆ ಪೊಲೀಸ್‌ ಸಿಬ್ಬಂದಿ ಹಲ್ಲೆ

ಈ ಬಗ್ಗೆ ವಕೀಲೆ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅತ್ಯಾಚಾರ ಆರೋಪದ ಮೇಲೆ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸಪ್ಪ ಮಂಗಳೂರಿನಿಂದ ನಾಪತ್ತೆಯಾಗಿದ್ದ. ಎಲ್ಲೆಡೆ ಹುಡುಕಾಟ ನಡೆಸಿದ ಬಸವೇಶ್ವರ ನಗರ ಪೊಲೀಸರು ಆಗಸ್ಟ್ 30 ರಂದು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನಂತರ ಜೈಲಿಗಟ್ಟಿದ್ದಾರೆ.

Share This Article