ವಾಷಿಂಗ್ಟನ್: ಭಾರತ ಇನ್ನೆರಡು ತಿಂಗಳಲ್ಲಿ ನಮಗೆ ಕ್ಷಮೆಯಾಚಿಸುತ್ತದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್ ಲುಟ್ನಿಕ್ ಹೇಳಿಕೆ ನೀಡಿದ್ದಾರೆ.
ರಷ್ಯಾದ ತೈಲವನ್ನು ಖರೀದಿಸದಂತೆ ಅಮೆರಿಕದ ಒತ್ತಡಕ್ಕೆ ಭಾರತ ಮಣಿದಿಲ್ಲ. ಆದರೂ, ಕೆಲವೇ ತಿಂಗಳುಗಳಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ಮತ್ತೆ ಬರುತ್ತದೆ ಎಂದು ಲುಟ್ನಿಕ್ ತಿಳಿಸಿದ್ದಾರೆ. ಇದನ್ನೂ ಓದಿ: ಟೆಕ್ ದಿಗ್ಗಜರಿಗೆ ಟ್ರಂಪ್ ಡಿನ್ನರ್ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ
ಒಂದು ಅಥವಾ ಎರಡು ತಿಂಗಳಲ್ಲಿ ಭಾರತ ಮಾತುಕತೆಗೆ ಬರಲಿದೆ ಎಂದು ನಾನು ಭಾವಿಸುತ್ತೇನೆ. ಕ್ಷಮಿಸಿ ಅಂತ ಕೇಳುತ್ತಾರೆ. ಡೊನಾಲ್ಡ್ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮತ್ತೆ ಪ್ರಯತ್ನಿಸುತ್ತಾರೆಂದು ಬ್ಲೂಮ್ಬರ್ಗ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಒಂದು ವೇಳೆ ಅಮೆರಿಕವನ್ನು ಬೆಂಬಲಿಸದಿದ್ದರೆ, ರಫ್ತಿನ ಮೇಲೆ ಶೇ.50 ರಷ್ಟು ಸುಂಕವನ್ನು ಭಾರತ ಪಾವತಿಸಬೇಕಾಗುತ್ತದೆ. ಭಾರತವು ತನ್ನ ಮಾರುಕಟ್ಟೆಯನ್ನು ತೆರೆಯಲು, ರಷ್ಯಾದ ತೈಲ ಖರೀದಿ ನಿಲ್ಲಿಸಲು ಮತ್ತು ಬ್ರಿಕ್ಸ್ನ ಭಾಗವಾಗುವುದನ್ನು ನಿಲ್ಲಿಸಲು ಬಯಸುವುದಿಲ್ಲ. ನೀವು ರಷ್ಯಾ ಮತ್ತು ಚೀನಾ ನಡುವೆ ಸೇತುವೆಯಾಗಲು ಬಯಸಿದರೆ, ಹೋಗಿ. ಆದರೆ ಡಾಲರ್ ಅನ್ನು ಬೆಂಬಲಿಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವನ್ನು ಬೆಂಬಲಿಸಿ. ನಿಮ್ಮ ಅತಿದೊಡ್ಡ ಕ್ಲೈಂಟ್ ಅನ್ನು ಬೆಂಬಲಿಸಿ. ಇಲ್ಲದಿದ್ದರೆ, 50% ಸುಂಕಗಳನ್ನು ಪಾವತಿಸಿ. ಇದು ಎಷ್ಟು ಕಾಲ ಇರುತ್ತದೆ ಎಂದು ನೋಡೋಣ ಎಂದಿದ್ದಾರೆ.
ರಷ್ಯಾದ ಕಚ್ಚಾತೈಲವು ನಿಜಕ್ಕೂ ಅಗ್ಗವಾಗಿದೆ. ತೈಲ ಖರೀದಿಗೆ ರಷ್ಯನ್ನರು ಜನರನ್ನು ಹುಡುಕುತ್ತಿದ್ದಾರೆ. ಅಗ್ಗವಾದ ತೈಲ ಖರೀದಿಸಿ ಹಣ ಸಂಪಾದಿಸೋಣ ಅಂತ ಭಾರತ ತೀರ್ಮಾನಿಸಿದೆ ಎಂದು ಲುಟ್ನಿಕ್ ಮಾತನಾಡಿದ್ದಾರೆ. ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್