ನಮ್ಮದಷ್ಟೆ ಅಲ್ಲ, ಬಿಜೆಪಿಯವರ ಕೇಸ್ ಕೂಡ ವಾಪಸ್ – 62 ಪ್ರಕರಣ ವಾಪಸ್‌ಗೆ ಡಿಕೆಶಿ ಸಮರ್ಥನೆ

By
2 Min Read

ಬೆಂಗಳೂರು: ನಮ್ಮದಷ್ಟೇ ಅಲ್ಲ ಬಿಜೆಪಿಯವರ (BJP) ಕೇಸ್‌ ಕೂಡ ಸಂಪುಟದಲ್ಲಿ ವಾಪಸ್‌ ಪಡೆದಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ತಮ್ಮ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್‌ ಕೇಸ್‌ ವಾಪಸ್ ಪಡೆದ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಡಿಕೆಶಿ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್‌ ಕೇಸ್‌ ವಾಪಸ್ ಪಡೆದ ಸರ್ಕಾರ

ನಮ್ಮದಷ್ಟೆ ಅಲ್ಲ, ಬಿಜೆಪಿಯವರ ಕೇಸ್ ಕೂಡ ವಾಪಸ್ ಪಡೆದಿದ್ದಾರೆ. ಇಡಿ (ED) ಬಂಧನ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಯಾರು ಏನು ಮಾಡಲಿಲ್ಲ. ಕೆಲವು ಕೇಸ್‌ ದಬಾವಣೆ ಮೇಲೆ ಬಿಜೆಪಿಯವರು ಹಾಕಿಸಿದ್ರು. ನನ್ನ ಮೇಲೆ, ಸಿಎಂ ಮೇಲೆ ಬೇಕಾದಷ್ಟು ಕೇಸ್ ಹಾಕಿಸಿದ್ರು. ನಾವು ನೋಡಿಕೊಂಡು ಕೂರಬೇಕಾ? ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಕೊಂದವರು ಯಾರು? – ಧರ್ಮಸ್ಥಳ ಪ್ರಕರಣದ ಬಗ್ಗೆ ಮಹಿಳಾ ಸಂಘಟನೆಗಳಿಂದ ಸೋನಿಯಾ ಗಾಂಧಿಗೆ ಪತ್ರ

ನನ್ನ ಮೇಲಿನ ಇಡಿ ಕೇಸ್ ವಜಾ ಆಗಿದೆ, ನಾನು ಬಂಧನ ಆಗಿದ್ದ ಕೇಸ್ ವಜಾ ಆಗಿದೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ (Supreme Court) ವಜಾ ಆಯ್ತು ನನಗೆ ನ್ಯಾಯಕೊಡುವವರು ಯಾರು..? ಜೈಲಿನಿಂದ ಬಿಡುಗಡೆ ಆಗಿ ಬಂದಾಗ, ದೊಡ್ಡ ಸಂಭ್ರಮಾಚರಣೆ ಅಂದ್ರು. ಯಾರೆಲ್ಲ ಟೀಕೆ ಮಾಡಿದ್ರು, ಕೇಸ್ ವಜಾ ಮಾಡಿದಾಗ ಯಾಕೆ ಅಭಿನಂದನೆ ಸಲ್ಲಿಸಲಿಲ್ಲ…? ಇದೊಂದೇ ಅಲ್ಲ ನೂರಾರು ಕೇಸ್ ವಜಾ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ʻಬುರುಡೆʼ ಕೇಸ್‌ | ಮತ್ತೊಂದು ರಹಸ್ಯ ಸ್ಫೋಟ – ಕೇರಳದ ಯೂಟ್ಯೂಬರ್ ಮನಾಫ್‌ಗೆ SIT ನೋಟಿಸ್

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಬಿಜೆಪಿ ನಾಯಕರ ಆಕ್ಷೇಪ ವಿಚಾರ ಕುರಿತು ಮಾತನಾಡಿ, ಕರ್ನಾಟಕ ಸರ್ಕಾರದ ತೀರ್ಮಾನ ಬಿಜೆಪಿಗೆ ಯಾಕೆ ಆತಂಕ? ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸರ್ಕಾರಕ್ಕೆ ಅವಕಾಶ ಇದೆ. ಕಾನೂನಲ್ಲೇ ಇದೆ ಅವರ ಅವಧಿಯಲ್ಲೇ ಮಾಡಿದಂತ ಕಾನೂನಿನಲ್ಲೇ ಇದೆ. ಬ್ಯಾಲೆಟ್ ಅಥವಾ ಇವಿಎಂನಲ್ಲಿ ಚುನಾವಣೆ ಮಾಡಬಹುದು ಅಂತ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕು ಅಂತ ಸರ್ಕಾರ ತೀರ್ಮಾನಿಸಿದೆ. ಗಾಬರಿ ಯಾಕೆ ಆಗುತ್ತಿದೆ ನಿಮಗೆ? ಕಳ್ಳನ ಮನಸ್ಸು ಹುಳ್ಳುಹುಳ್ಳಗೆ ಅಂದಾಗೆ ನೋಡಿಕೊಳ್ಳುತ್ತಿದ್ದೀರಾ? ಅಂತ ಕುಟುಕಿದ್ದಾರೆ.

ನಾವು ಪಾರ್ಲಿಮೆಂಟ್ ಎಲೆಕ್ಷನ್ ಎಲ್ಲ ತನಿಖೆ ಮಾಡಿದ್ದೇವೆ. ಆದ್ರ ಬಗ್ಗೆ ನಾನು ಚರ್ಚೆ ಮಾಡಲ್ಲ. ಸೊಸೈಟಿಗೆ ಚುನಾವಣೆ ಮಾಡಲ್ವ ಅದೇ ರೀತಿ ಮಾಡಬೇಕು ಅಂದುಕೊಂಡಿದ್ದೇವೆ. ಸೆಂಟ್ರಲ್ ಎಲೆಕ್ಷನ್ ಕಮಿಷನ್ ಸ್ಟೇಟ್, ಪಾರ್ಲಿಮೆಂಟ್, ಅಸೆಂಬ್ಲಿದು ಅವರು ಏನು ತೀರ್ಮಾನ ಮಾಡ್ತಾರೋ ಮಾಡಲಿ. ಸರ್ಕಾರದ ತೀರ್ಮಾನ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಅಂತ ಸ್ಪಷ್ಟಪಡಿಸಿದರು.

Share This Article