– ಡಿಸೆಂಬರ್ನಿಂದ ಇಲ್ಲಿಯವರೆಗೆ ಹಾಸ್ಟೆಲ್ನಲ್ಲಿ ಐದು ವಿದ್ಯಾರ್ಥಿಗಳ ಸಾವು
ಪಣಜಿ: ವಿದ್ಯಾರ್ಥಿಯೋರ್ವ ಹಾಸ್ಟೆಲ್ ರೂಮ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗುರುವಾರ ದಕ್ಷಿಣ ಗೋವಾದ (Goa) ಬಿಐಟಿಎಸ್ ಪಿಲಾನಿ ಕ್ಯಾಂಪಸ್ನಲ್ಲಿ (BITS Pilani campus) ನಡೆದಿದೆ.
ರಿಷಿ ನಾಯರ್ (20) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಗುರುವಾರ ಪೋಷಕರು ಮಾಡಿದ ಕರೆಗಳಿಗೆ ರಿಷಿ ಪ್ರತಿಕ್ರಿಯಿಸಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಹಾಸ್ಟೆಲ್ ಸಿಬ್ಬಂದಿಗೆ ಕರೆ ಮಾಡಿ ಪರಿಶೀಲಿಸುವಂತೆ ಹೇಳಿದ್ದರು. ಈ ವೇಳೆ ಹಾಸ್ಟೆಲ್ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ರಿಷಿ ಹಾಸಿಗೆ ಮೇಲೆ ಮಲಗಿದ್ದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಪ್ಲಾಸ್ಟಿಕ್ ಗನ್ ಹಿಡಿದ ಚಿನ್ನದಂಗಡಿ ದರೋಡೆ ಮಾಡಿದ್ದ ಗ್ಯಾಂಗ್ ಬಂಧನ
ರಿಷಿ, ಬಿಐಟಿಎಸ್ ಪಿಲಾನಿಯ ಹೈದರಾಬಾದ್ (Hyderabad) ಕ್ಯಾಂಪಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತ ಅಲ್ಲಿ ಹೈದರಾಬಾದ್ನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಎರಡೂವರೆ ತಿಂಗಳ ಹಿಂದೆ ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಆಕೆಯ ಸಾವಿನಿಂದ ರಿಷಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದೆಲ್ಲದರಿಂದ ಹೊರಬರಲು ಆತನನನ್ನು ಹೈದರಾಬಾದ್ನಿಂದ ಗೋವಾದ ಬಿಐಟಿಎಸ್ ಪಿಲಾನಿ ಕಾಲೇಜಿಗೆ ಸೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆಗಿನ ಟ್ರಂಪ್ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿಮೇಲ್ನೋಟಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಮರಣೋತ್ತರ ಪರೀಕ್ಷೆಯ ಬಳಿಕವೇ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ನೀರು ಕುಡಿಯೋಕೆ ಉತ್ತೇಜನ – ರಾಜ್ಯದ ಶಾಲೆಗಳಲ್ಲಿ ಶುರುವಾಗುತ್ತಾ ‘ವಾಟರ್ ಬೆಲ್’?
ಡಿಸೆಂಬರ್ 2024ರಿಂದ ಇಲ್ಲಿವರೆಗೆ ಗೋವಾ ಕ್ಯಾಂಪಸ್ನಲ್ಲಿ ಇದು ಐದನೇ ವಿದ್ಯಾರ್ಥಿಯ ಸಾವಾಗಿದೆ. ವಿದ್ಯಾರ್ಥಿಗಳಾದ ಓಂ ಪ್ರಿಯಾನ್ ಸಿಂಗ್ (ಡಿಸೆಂಬರ್ 2024), ಅಥರ್ವ್ ದೇಸಾಯಿ (ಮಾರ್ಚ್ 2025), ಕೃಷ್ಣ ಕಸೇರಾ (ಮೇ 2025) ಮತ್ತು ಕುಶಾಗ್ರ ಜೈನ್ (ಆಗಸ್ಟ್ 2025) ಹಾಸ್ಟೆಲ್ ರೂಮ್ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಈ ಸಂಬಂಧ ಗೋವಾ ಸಿಎಂ ಪ್ರಮೋದ್ ಸಾವಂತ್ ಮಾತನಾಡಿ, ತನಿಖೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇಂತಹ ಘಟನೆಗಳು ದುರದೃಷ್ಟಕರ ಮತ್ತು ಮತ್ತೆ ಸಂಭವಿಸಬಾರದು. ವರದಿಯನ್ನು ಸ್ವೀಕರಿಸಿದ ನಂತರ ರಾಜ್ಯ ಸರ್ಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.