ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ʻಬಿಗ್ ಬಾಸ್ ಕನ್ನಡʼ ತನ್ನ 12ನೇ (Bigg Boss Kannada 12) ಆವೃತ್ತಿಗೆ ಸಜ್ಜಾಗಿದೆ. ಇತ್ತೀಚೆಗೆ ಲೋಗೋ ಲಾಂಚ್ ಆಗಿದ್ದು, ಈ ಸೀಸನ್ ಯಾವಾಗ ಶುರುವಾಗುತ್ತದೆ ಅನ್ನೋ ಕ್ಯೂರಿಯಾಸಿಟಿ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಈ ಹೊತ್ತಿನಲ್ಲೇ ಬಿಗ್ ಬಾಸ್ 12 ಪ್ರಾರಂಭದ ದಿನಾಂಕವನ್ನ ಖುದ್ದು ಕಿಚ್ಚ ಸುದೀಪ್ (Kichcha Sudeep) ಅವರೇ ಘೋಷಿಸಿದ್ದಾರೆ. ಯಾವಾಗ ಅಂತೀರಾ? ಮಾಹಿತಿ ಇಲ್ಲಿದೆ ನೋಡಿ..
ಯೆಸ್. ಕಿಚ್ಚ ಸುದೀಪ್ ನಿರೂಪಣೆಯ ʻಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ದಿನಗಣನೆ ಶುರುವಾಗಿದೆ. ಈ ಸೀಸನ್ ಅಭಿಮಾನಿಗಳಲ್ಲಿ ಅಪಾರ ಕುತೂಹಲವನ್ನ ಹುಟ್ಟುಹಾಕಿದೆ. ಹೊಸ ಥೀಮ್, ರೋಚಕ ಸ್ಪರ್ಧಿಗಳು ಮತ್ತು ಟ್ವಿಸ್ಟ್‌ಗಳೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ತೆಲುಗು ಸ್ಟಾರ್ ರಾಮ್ ಚರಣ್
ನಿರ್ಮಾಪಕ ಸಂದೇಶ್ ನಾಗರಾಜ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್, ಅತೀ ಶೀಘ್ರದಲ್ಲೇ ಪರದೆ ಮೇಲೆ ಸಿಕ್ತೇನೆ. ಸೆಪ್ಟೆಂಬರ್ 28ರಿಂದ ನಿಮಗೆ ಟಿವಿಯಲ್ಲಿ ಸಿಗುತ್ತೇನೆ. ನಿಮ್ಮ ಪ್ರೀತಿಗೆ ಥ್ಯಾಂಕ್ಯೂ, ಲವ್ ಯೂ ಆಲ್ ಅಂತ ಹೇಳುವ ಮೂಲಕ ʻಬಿಗ್ ಬಾಸ್ ಕನ್ನಡ ಸೀಸನ್ 12’ರ ಪ್ರಾರಂಭ ದಿನಾಂಕವನ್ನ ರಿವೀಲ್ ಮಾಡಿಬಿಟ್ರು. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ
ಸಾಮಾನ್ಯವಾಗಿ ಸಪ್ಟೆಂಬರ್ ಅಂತ್ಯದಲ್ಲೇ ಕನ್ನಡದ ಬಿಗ್‌ಬಾಸ್‌ಗೆ ಪ್ರತಿವರ್ಷ ಚಾಲನೆ ಸಿಗುತ್ತಿತ್ತು. ಅದರಂತೆ ಈ ಬಾರಿಯೂ ಸಪ್ಟೆಂಬರ್ ಅಂತ್ಯದಲ್ಲೇ ಶುರುವಾಗಲಿದೆ. ಸಪ್ಟೆಂಬರ್ 28ರ ಭಾನುವಾರ ಕನ್ನಡದ ಬಿಗ್‌ಬಾಸ್ ಸೀಸನ್‌ಕ್ಕೆ ಚಾಲನೆ ಸಿಗಲಿದೆ. ಈ ಬಾರಿ ಯಾರೆಲ್ಲ ಕಂಟೆಸ್ಟಂಟ್ಸ್ ಇರ್ತಾರೆ? ಎಷ್ಟು ಮಂದಿ ಸ್ಪರ್ಧೆಯಲ್ಲಿರ್ತಾರೆ? ಏನೆಲ್ಲಾ ಬದಲಾವಣೆ ಆಗಿದೆ? ಎಲ್ಲವನ್ನೂ ಅಂದೇ ತಿಳಿದುಕೊಳ್ಳಬಹುದು. ಇದನ್ನೂ ಓದಿ: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ತೆಲುಗು ಸ್ಟಾರ್ ರಾಮ್ ಚರಣ್