ಇಲಿ ಗಣೇಶನ ವಾಹನವಾಗಿದ್ದು ಹೇಗೆ?

By
1 Min Read
ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಗಣೇಶನ ವಾಹನ ಇಲಿ. ಆದರೆ ಇದರ ಹಿಂದಿನ ಕಾರಣವೇನು ಎಂದು ಅರಿತಿರುವವರು ಕಡಿಮೆ. ಇಲಿ ಗಣೇಶನ ವಾಹನವಾಗಿದ್ದು ಹೇಗೆ ಎನ್ನುವ ಕಥೆ ವಿಭಿನ್ನ ರೀತಿಯಲ್ಲಿ ವರ್ಣಿಸಲಾಗಿದೆ. ಹಿಂದೂ ಗ್ರಂಥಗಳಲ್ಲಿ ಹಾಗೂ ಬೇರೆ ಬೇರೆ ಸ್ಥಳೀಯ ಗ್ರಂಥಗಳಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ಕ್ರೌಂಚ ಎಂಬ ಒಬ್ಬ ಸಂಗೀತಗಾರನಿದ್ದ. ಆತ ಬಹಳ ದುರಹಂಕಾರಿಯಾಗಿದ್ದ. ಹೀಗೆ ಒಂದು ದಿನ ಆತ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಒಬ್ಬ ಋಷಿ ಮುನಿಯ ಪಾದವನ್ನು ತುಳಿದ. ಇದರಿಂದ ಕೋಪಗೊಂಡ ಋಷಿಮುನಿ ಕ್ರೌಂಚನಿಗೆ ನೀನು ಇಲಿಯಾಗುತ್ತೀಯಾ ಎಂದು ಶಪಿಸಿದನು. ಆಗ ಕ್ರೌಂಚ ತಕ್ಷಣವೇ ಒಂದು ದೊಡ್ಡ, ದೈತ್ಯಾಕಾರದ ಇಲಿಯಾಗಿ ಬದಲಾದನು. ಅಂದಿನಿಂದ ಇಲಿಯಾದ ಕ್ರೌಂಚ ಆಶ್ರಮ, ತೋಟಗಳಲ್ಲಿದ್ದ ಜನರನ್ನು ಹೆದರಿಸಿ, ಬೆಳೆ, ಮನೆಗಳನ್ನು ನಾಶ ಮಾಡಲು ಪ್ರಾರಂಭಿಸಿತು. ಜೊತೆಗೆ ಧ್ಯಾನ ಮಾಡುವ ಋಷಿಮುನಿಗಳಿಗೂ ಕೂಡ ತೊಂದರೆ ಕೊಡಲು ಶುರು ಮಾಡಿತ್ತು.ಇದನ್ನೂ ಓದಿ: ಗಣೇಶ ಚತುರ್ಥಿ – ಗಣಪತಿಯ ವಿವಿಧ ಹೆಸರುಗಳು ಯಾವುವು? ಅರ್ಥ ಏನು?

ಇದರಿಂದ ಬೇಸತ್ತ ಋಷಿಮುನಿಗಳು ಗಣೇಶನಲ್ಲಿ ಪಾರ್ಥಿಸಿಕೊಂಡು, ಈ ಇಲಿಯಿಂದ ಆಗುತ್ತಿರುವ ವಿನಾಶದಿಂದ ನಮ್ಮನ್ನು ರಕ್ಷಿಸು ಎಂದು ಬೇಡಿಕೊಂಡರು. ಆಗ ಗಣೇಶ ಪ್ರತ್ಯಕ್ಷನಾಗಿ ಇಲಿಯ ಜೊತೆಗೆ ಕಾದಾಟಕ್ಕಿಳಿದನು.

ಗಣೇಶನನ್ನು ಸೋಲಿಸಲು ಎಷ್ಟೇ ಪ್ರಯತ್ನಿಸಿದರೂ ಇಲಿಗೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಗಣೇಶ ತನ್ನ ಉಪಾಯದಿಂದ ಇಲಿಯನ್ನು ಬಲೆಗೆ ಬೀಳಿಸಿಕೊಂಡನು. ಸೋಲನ್ನು ಒಪ್ಪಿಕೊಂಡ ಇಲಿ ಕ್ಷಮೆಯಾಚಿಸಿತು. ಆಗ ಗಣೇಶ ಇಲಿಯನ್ನು ಕ್ಷಮಿಸಿ, ಇಂದಿನಿಂದ ನೀನು ನನ್ನ ವಾಹನ ಎಂದು ಹೇಳಿದ.

ಅಂದಿನಿಂದ ಇಲಿಯು ಮೂಷಕನಾಗಿ ಬದಲಾಯಿತು.ಇದನ್ನೂ ಓದಿ: Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

Share This Article