ಬುರುಡೆ ಗ್ಯಾಂಗ್‌ ಹೇಳಿದಂತೆ ನಾನು ಮಾಡಿದ್ದೇನೆ – ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಥಂಡಾ

By
2 Min Read

– 11 ಗಂಟೆಗಳ ವಿಚಾರಣೆಯಲ್ಲಿ ಸುಜಾತ ಸತ್ಯ ಸ್ಫೋಟ
– ಬುರುಡೆ ಗ್ಯಾಂಗ್‌ನಿಂದ ಅನನ್ಯಾ ಸೃಷ್ಟಿ
– ಕೇಸ್ ಹಿಂಪಡೆಯುತ್ತೇನೆ ಎಂದು ಕಣ್ಣೀರು

ಮಂಗಳೂರು: ದಿನಕ್ಕೊಂದು ಕಥೆ ಹೇಳುತ್ತಾ ಅನನ್ಯಾ ಭಟ್ (Ananya Bhat) ತನ್ನ ಮಗಳು ಎಂದು ಎಲ್ಲೆಡೆ ಸುದ್ದಿಯಾಗಿದ್ದ ಸುಜಾತ ಭಟ್ (Sujatha Bhat) ವಿಶೇಷ ತನಿಖಾ ತಂಡದ ವಿಚಾರಣೆ ಎದುರಿಸಿದ್ದಾರೆ.

ಎರಡು ದಿನಗಳ ಕಾಲ ನಡೆದ ವಿಚಾರದಲ್ಲಿ ಅನನ್ಯಾ ಭಟ್ ತನ್ನ ಮಗಳು ಎಂದು ದಾಖಲೆ ನೀಡಲಾಗದೆ ಸುಸ್ತಾಗಿದ್ದಾರೆ. ಅನನ್ಯಾ ಭಟ್ ಕಥೆ ಸೃಷ್ಟಿಯ ಹಿಂದೆ ಇದ್ದ ಗ್ಯಾಂಗ್‌ನ ಮುಖವಾಡ ಅನಾವರಣ ಮಾಡಿದ ಸುಜಾತ ಭಟ್ ಹೇಳಿಕೆಯಿಂದ ಬುರುಡೆ ಗ್ಯಾಂಗ್‌ಗೆ ಸಂಕಷ್ಟಕ್ಕೆ ಸಿಲುಕಿದೆ.

ಬುಧವಾರ  ನಡೆದ ವಿಚಾರಣೆಯಲ್ಲಿ ಅನನ್ಯಾ ಭಟ್ ತನ್ನ ಮಗಳು ಎಂದು ದಾಖಲೆ ನೀಡಲಾಗದೇ ಸುಸ್ತಾಗಿದ್ದಾರೆ. ಅನನ್ಯಾ ಭಟ್ ಕಥೆ ಸೃಷ್ಟಿಯ ಹಿಂದೆ ಇದ್ದ ಗ್ಯಾಂಗ್‌ನ ಮುಖವಾಡವನ್ನ ಸುಜಾತ ಭಟ್ ಅನಾವರಣ ಮಾಡಿದ್ದಾರೆ. ಇದನ್ನೂ ಓದಿ: ʻಬುರುಡೆʼ ಪ್ರಕರಣದಲ್ಲಿ ಚಿನ್ನಯ್ಯನೇ ಎ1 ಹಳೆ ಸೆಕ್ಷನ್ ತೆಗೆದು ಹೊಸ ಸೆಕ್ಷನ್ ಹಾಕಿದ SIT

 

ಮಂಗಳವಾರ ಕರೆಯದಿದ್ದರೂ ಬೆಳ್ಳಂಬೆಳಗ್ಗೆ ಎಸ್‌ಐಟಿ ಕಚೇರಿಯಲ್ಲಿ ಪ್ರತ್ಯಕ್ಷವಾಗಿದ್ದ ಸುಜಾತಾ ಭಟ್‌ಗೆ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ಗ್ರಿಲ್ ಮಾಡಿದರು. ಶಿವಮೊಗ್ಗದ ರಿಪ್ಪನ್ ಪೇಟೆ, ಉಡುಪಿಯ ಪರಿಕದ ಪರಿಸರ, ಕೊಡಗಿನ ವಿರಾಜಪೇಟೆ ಲಿಂಕ್ ಸಂಬಂಧ ವಿಚಾರಣೆ ನಡೆಸಿದ್ದ ಎಸ್‌ಐಟಿ ಬುಧವಾರ ಮತ್ತೆ ಪ್ರಶ್ನೆ ಕೇಳಿತು. ಆಟೋದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಳ್ತಂಡಿಯ ಎಸ್‌ಐಟಿ ಕಚೇರಿಗೆ ಬಂದಿದ್ದ ಸುಜಾತ ಭಟ್ ತನಿಖಾಧಿಕಾರಿ ಮುಂದೆ ಹೇಳಿಕೆ ದಾಖಲಿಸಿದರು. ಇದನ್ನೂ ಓದಿ: SIT ದಾಳಿ ತಿಳಿದು ತಿಮರೋಡಿ ಎಸ್ಕೇಪ್ – ಅತ್ತ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮತ್ತೊಂದು ದೂರು

ಎಸ್‌ಐಟಿ ವಿಚಾರಣೆಯಲ್ಲಿ ಸುಜಾತಾ ಭಟ್ ತಬ್ಬಿಬ್ಬಾಗಿದ್ದಾರೆ. ಅನನ್ಯಾ ಭಟ್ ಸೃಷ್ಟಿ ಬಗ್ಗೆ ಪ್ರಶ್ನಿಸಿ ಎಲ್ಲ ಸತ್ಯವನ್ನೂ ಆಕೆಯ ಬಾಯಿಂದಲೇ ಕಕ್ಕಿಸಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಾಗದೇ ಸುಸ್ತಾದ ಸುಜಾತ ಭಟ್ ನಾನು ಹೇಳಿದ್ದ ಅನನ್ಯಾ ಭಟ್ ಕಥೆ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ನನಗೆ ಬುರುಡೆ ಗ್ಯಾಂಗ್ ಹೇಳಿದಂತೆ ಮಾಡಿದ್ದೇನೆ. ನನ್ನ ಹಿರಿಯರ ಆಸ್ತಿ ನನಗೆ ಬೇಕಿತ್ತು. ಈ ಕಾರಣಕ್ಕೆ ಅನನ್ಯಾ ಭಟ್‌ ಪಾತ್ರ ಸೃಷ್ಟಿಯಾಗಿತ್ತು. ಬೇರೆ ನನಗೆ ಏನು ಗೊತ್ತಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರು ಹಾಕಿದ್ದಾರೆ. ಕೊಟ್ಟ ದೂರನ್ನು ವಾಪಸ್‌ ಪಡೆಯುವುದಾಗಿಯೂ ಸುಜಾತ ಗೋಗರೆದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

 

ಬುಧವಾರ ರಾತ್ರಿ 10 ಗಂಟೆಯ ವೇಳೆ ಸುಜಾತ ಭಟ್‌ ವಿಚಾರಣೆ ಮುಗಿಸಿ ಹೊರ ಬಂದರು. ಈ ವೇಳೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ, ನೀವು ಮಾಡಿದ ಸಹಕಾರ ಸಾಕು. ನನ್ನನ್ನು ನೀವು ಫಾಲೋ ಮಾಡುವ ಅಗತ್ಯವಿಲ್ಲ. ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಟ್ಟು ಹೊರಹಾಕಿ ರಿಕ್ಷಾದಲ್ಲಿ ತೆರಳಿದರು. ಇದನ್ನೂ ಓದಿ: ತಿಮರೋಡಿಯ ಮನೆಯ ಒಳಗಡೆಗೆ ಚಿನ್ನಯ್ಯನಿಗೆ ಇರಲಿಲ್ಲ ಪ್ರವೇಶ!

Share This Article