ರಾಧಿಕಾ ಹುಟ್ಟುಹಬ್ಬದಲ್ಲಿ ಸ್ಟಾರ್ ಗೆಳತಿಯರು, ಒಬ್ರಗಿಂತ ಒಬ್ರು ಸುಂದರಿಯರು

By
1 Min Read

ಹುಭಾಷಾ ನಟಿ ರಾಧಿಕಾ ಶರತ್‌ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ಆ.21 ಕ್ಕೆ 63ನೇ ವರ್ಷಕ್ಕೆ ಕಾಲಿಟ್ಟ ಈ ನಟಿಯ ಹುಟ್ಟುಹಬ್ಬವನ್ನ ಸ್ನೇಹಿತೆಯರು ಅದ್ದೂರಿಯಾಗಿ ಆಚರಿಸಿದ್ದಾರೆ. ತಮ್ಮ ಸಮಕಾಲೀನ ನಟಿಮಣಿಯರನ್ನ ಕರೆಸಿ ಗೆಟ್ ಟುಗೆದರ್ ಪಾರ್ಟಿ ಮಾಡಿದ್ದಾರೆ ರಾಧಿಕಾ ಶರತ್‌ಕುಮಾರ್.

ರಾಧಿಕಾ ಶರತ್‌ಕುಮಾರ್ ಪಾರ್ಟಿಯಲ್ಲಿ ಅನೇಕ ಸಿನಿಮಾ ನಟಿಯರು ಪಾಲ್ಗೊಂಡಿದ್ರು. ಮೀನಾ, ರಮ್ಯಾಕೃಷ್ಣ, ತ್ರಿಶಾ ಸೇರಿದಂತೆ ಹತ್ತಾರು ನಟಿಯರು ಪಾಲ್ಗೊಂಡಿದ್ರು. ಪಾರ್ಟಿಯಲ್ಲಿ ಹೆಚ್ಚಿನ ಗಂಡ್‌ಹೈಕ್ಳಿಗೆ ಅವಕಾಶ ಇರಲಿಲ್ಲ. ಆದರೂ ರಾಧಿಕಾ ಪತಿ ಶರತ್‌ಕುಮಾರ್ ಮಾತ್ರ ನಟಿಯರ ಮಧ್ಯೆ ನಿಂತು ಪೋಸ್ ಕೊಡೋದನ್ನ ಮರೆಯಲಿಲ್ಲ.

ಅಂದಹಾಗೆ ರಾಧಿಕಾ ತೆಲುಗು ಹಾಗೂ ತಮಿಳು ಇಂಡಸ್ಟ್ರಿಯಲ್ಲಿ ಅಪಾರ ಸ್ನೇಹಿತರನ್ನ ಹೊಂದಿದ್ದಾರೆ. ಆಗಾಗ 90 ತಾರೆಯರ ಗುಂಪು ಹೈದ್ರಾಬಾದ್‌ನಲ್ಲಿ ಸೇರೋದುಂಟು. ಇದೀಗ ಚಿಕ್ಕ ಬರ್ತ್ಡೇ ಪಾರ್ಟಿಗೆ ಸ್ಟಾರ್ ನಟಿಯರನ್ನೆಲ್ಲಾ ಒಟ್ಟಿಗೆ ಸೇರಿಸಿದ್ದಾರೆ ರಾಧಿಕಾ. ಹೀಗೆ ಎಲ್ಲಾ ತಾರೆಯರನ್ನ ಒಂದೇ ಫ್ರೇಮ್‌ನಲ್ಲಿ ನೋಡೋದೇ ಚೆಂದ ಎನ್ನುತ್ತಿದ್ದಾರೆ ಸಿನಿಪ್ರಿಯರು.

Share This Article