ಶ್ರಾವಣ ಕೊನೆ ಶನಿವಾರ – ಅಂಜನಾದ್ರಿಗೆ ಹರಿದು ಬಂದ ಭಕ್ತ ಸಾಗರ

By
1 Min Read

ಕೊಪ್ಪಳ: ಶ್ರಾವಣ ಕೊನೆಯ ಶನಿವಾರದ ಹಿನ್ನೆಲೆ ಹನುಮನ ಭಕ್ತರ ಸಾಗರವೇ ಅಂಜನಾದ್ರಿಗೆ (Anjanadri) ಹರಿದುಬಂದಿದೆ. ಈ ವೇಳೆ ದೇವಸ್ಥಾನದ ಆವರಣದಲ್ಲಿ ನೂಕುನಗ್ಗಲು ಉಂಟಾಗಿತ್ತು.

ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಸಮೀಪ ಇರುವ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದುಬಂದಿತ್ತು.ಇದನ್ನೂ ಓದಿ: ನಂದ-ಗೋಕುಲದಲ್ಲಿ ಧಾರಾವಾಹಿಯಲ್ಲಿ ಹೊಸ ಪ್ರಯತ್ನ

ಶ್ರಾವಣದ ಕೊನೆಯ ಶನಿವಾರ ಅಂಗವಾಗಿ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿ ದೇವರಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ಶ್ರೀರಾಮನಾಮ ಪಠಣ, ಹನುಮಾನ್ ಚಾಲಿಸ್ ಪಠಣ ಸೇರಿದಂತೆ ನಾನಾ ಧಾರ್ಮಿಕ ಪೂಜೆಗಳು ಜರುಗಿದವು. ಸ್ಥಳೀಯ ಭಕ್ತರು ಸೇರಿದಂತೆ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಗದಗ, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಸೇರಿದಂತೆ ನಾನಾ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಸಂಚಾರ ದಟ್ಟಣೆ:
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಬೆಟ್ಟದ ಕೆಳಗಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಅಂಜನಾದ್ರಿ ಬೆಟ್ಟದ ಕೆಳಗಡೆಯ ಪಾರ್ಕಿಂಗ್ ಜಾಗ ಭರ್ತಿಯಾಗಿ ರಸ್ತೆಯ ಅಕ್ಕ ಪಕ್ಕದಲ್ಲಿಯೇ ಭಕ್ತರು ವಾಹನಗಳನ್ನು ಪಾರ್ಕಿಂಗ್ ಮಾಡಿಕೊಂಡು ದೇವರ ದರ್ಶನಕ್ಕೆ ಹೋಗಿದ್ದರು. ಹಾಗಾಗಿ ಗಂಗಾವತಿಯಿಂದ ಅಂಜನಾದ್ರಿ ಬೆಟ್ಟದ ಮಾರ್ಗವಾಗಿ ಹುಲಿಗಿಗೆ ಹೋಗುವ ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಯಿತು. ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಭಕ್ತರು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದನ್ನೂ ಓದಿ: ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ ವಿರಾಟ್ ಕೊಹ್ಲಿ?

Share This Article