ರಣ್ವೀರ್ ಸಿಂಗ್ ಸಿನಿಮಾ ಸೆಟ್ಟಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞರಿಗೆ ಫುಡ್ ಪಾಯ್ಸನ್!

By
1 Min Read

ಣ್ವೀರ್ ಸಿಂಗ್ (Ranveer Singh) ನಟನೆಯ ಸಿನಿಮಾ `ಧುರಂಧರ್’ (Dhurandhar) ಚಿತ್ರೀಕರಣ ಭರದಿಂದ ಸಾಗಿದೆ. ಆದರೆ, ಚಿತ್ರೀಕರಣದ ವೇಳೆಯಲ್ಲಿ ನಡೆದ ಮಹಾ ದುರಂತವೊಂದು ತಡವಾಗಿ ಬೆಳಕಿಗೆ ಬಂದಿದೆ. ಲೇಹ್ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಚಿತ್ರತಂಡಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಕಾಸ್ಟ್ & ಕ್ರೂ ಸದಸ್ಯರಿಗೆ ಫುಡ್ ಪಾಯ್ಸನ್ ಆಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ.

ಕಳೆದ ಭಾನುವಾರ (ಆ.17) ಲೇಹ್ ಸುತ್ತಮುತ್ತಲಿನ ಜಾಗದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಊಟ ಸೇವಿಸಿದ ಬಳಿಕ ಅನೇಕರಿಗೆ ತೀವ್ರ ವಾಂತಿ, ಹೊಟ್ಟೆನೋವು, ತಲೆಸುತ್ತುವಿಕೆ, ಅಸ್ವಸ್ಥತೆ ಉಂಟಾಗುತ್ತೆ. ಕೂಡಲೇ ಅವರನ್ನ ಸಜಲ್ ನರಬೂ ಮೆಮೋರಿಯಲ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತೆ. ಅಸ್ವಸ್ಥರೆಲ್ಲರಿಗೂ ಚಿಕಿತ್ಸೆ ನೀಡಿದ ಬಳಿಕ ಮರುದಿನವೇ ಎಲ್ಲರೂ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿರುತ್ತಾರೆ. ಮಕ್ಕಳೂ ಸೇರಿದಂತೆ ಬಹಳಷ್ಟು ಮಂದಿ ತೀವ್ರ ಅಸ್ವಸ್ಥಗೊಂಡಿದ್ದರು. ಸರ್ಕಾರಿ ಆರೋಗ್ಯಾಧಿಕಾರಿಗಳು ಆಹಾರದ ಸ್ಯಾಂಪಲ್‌ನ್ನು ವಶಕ್ಕೆ ಪಡೆದು ತನಿಖೆ ನಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾರಿಗೂ ತೀವ್ರ ಗಂಭೀರ ಸಮಸ್ಯೆ ಉಂಟಾಗಲಿಲ್ಲ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆಹಾರ ಹೇಗೆ ವಿಷಪೂರಿತವಾಗಿದೆ. ನೀರು ಪೂರೈಕೆ ಎಲ್ಲಿಂದ ನಡೆದಿದೆ. ಸ್ಥಳದಲ್ಲಿ ವಿಷಪೂರಿತ ಅಂಶಗಳು ಪತ್ತೆಯಾಗಿವೆಯೇ ಅನ್ನೋದ್ರ ಕುರಿತು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: `ನಮ್ಮ ಹತ್ರ ಬರೋ ಅವಶ್ಯಕತೆ ಇಲ್ಲ’ – ಪುಷ್ಪಮ್ಮನಿಗೆ ಮತ್ತೆ ಟಾಂಗ್ ಕೊಟ್ಟ ದೀಪಿಕಾ ದಾಸ್

ಅಂದಹಾಗೆ ಆರಂಭಿಕ ಮಾಹಿತಿ ಪ್ರಕಾರ ರಣ್ವೀರ್ ಸಿಂಗ್ ಸೆಟ್ಟಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಈ ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್, ಮಾಧವನ್, ಅಕ್ಷಯ ಖನ್ನಾ ಸೇರಿದಂತೆ ಹಲವರು ನಟಿಸಿದ್ದಾರೆ. ಹೀಗೆ ಧುರಂಧರ್ ಸೆಟ್ಟಲ್ಲಿ ಮಹಾ ದುರಂತವೊಂದು ಸೈಲೆಂಟಾಗೇ ನಡೆದುಹೋಗಿದೆ.

Share This Article