ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ

By
1 Min Read

ಮುಂಬೈ: ವಾಟ್ಸಪ್‌ಲ್ಲಿ ವೆಡ್ಡಿಂಗ್ ಕಾರ್ಡ್ (Wedding Card) ಬಂದ ತಕ್ಷಣ ಕ್ಲಿಕ್ ಮಾಡೋಕು ಮುನ್ನ ಎಚ್ಚರವಿರಲಿ. ಹೌದು, ಸರ್ಕಾರಿ ನೌಕರರೊಬ್ಬರು ವಾಟ್ಸಪ್‌ನಲ್ಲಿ (Whatsapp) ಬಂದಿದ್ದ ವೆಡ್ಡಿಂಗ್ ಕಾರ್ಡ್‌ನ್ನು ಕ್ಲಿಕ್ ಮಾಡಿ ಸುಮಾರು 1.90 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಹಿಂಗೋಲಿ (Hingoli) ಜಿಲ್ಲೆಯಲ್ಲಿ ನಡೆದಿದೆ.

ಸೈಬರ್ ವಂಚನೆಗೊಳಗಾದ ವ್ಯಕ್ತಿಗೆ ಆ.20ರಂದು ವಾಟ್ಸಪ್‌ನಲ್ಲಿ ಅಪರಿಚಿತ ನಂಬರ್‌ನಿಂದ ಮೆಸೇಜ್ ಬಂದಿತ್ತು. ಸಂದೇಶದಲ್ಲಿ 30/08/2025ರಂದು ಮದುವೆಗೆ ತಪ್ಪದೇ ಬರಬೇಕು. ಪ್ರೀತಿಯು ಸಂತೋಷದ ದ್ವಾರವನ್ನು ತೆರೆಯುವ ಕೀಲಿ ಕೈಯಾಗಿದೆ ಎಂದು ಬರೆದಿದ್ದರು. ಜೊತೆಗೆ ಪಿಡಿಎಫ್ ಫೈಲ್‌ವೊಂದನ್ನು ಕಳುಹಿಸಿದ್ದರು.ಇದನ್ನೂ ಓದಿ: ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

ಪಿಡಿಎಫ್ ಫೈಲ್‌ನ್ನು ಓಪನ್ ಮಾಡಿದ ತಕ್ಷಣವೇ ಸೈಬರ್ ವಂಚಕರು ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 1,90,000 ರೂ.ಯನ್ನು ವರ್ಗಾಯಿಸಿಕೊಂಡಿದ್ದಾರೆ. ಸದ್ಯ ಈ ಕುರಿತು ವಂಚನೆಗೊಳಗಾದ ವ್ಯಕ್ತಿ ಹಿಂಗೋಲಿ ಪೊಲೀಸ್ ಠಾಣೆ ಮತ್ತು ಸೈಬರ್ ಸೆಲ್ ಇಲಾಖೆಯಲ್ಲಿ ದೂರು ದಾಖಲಿಸಿದ್ದು, ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಸೈಬರ್ ವಂಚಕರು ವ್ಯಕ್ತಿಯ ಫೋನ್ ಹ್ಯಾಕ್ ಮಾಡಲು ಮತ್ತು ಮೊಬೈಲ್‌ನಲ್ಲಿನ ಡೇಟಾ ಕದಿಯಲು ಅಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (APK) ಫೈಲ್ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಈ ರೀತಿ ಬಂದ ಎಪಿಕೆ ಫೈಲ್ಸ್‌ನ್ನು ಒಮ್ಮೆ ಕ್ಲಿಕ್ ಮಾಡಿದರೆ ಮೊಬೈಲ್‌ನಲ್ಲಿ ಕೆಲವು ಫೈಲ್‌ಗಳು ಡೌನ್‌ಲೋಡ್ ಆಗುತ್ತವೆ. ಈ ಮೂಲಕ ಸೈಬರ್ ವಂಚಕರು ಮೊಬೈಲ್‌ನಲ್ಲಿನ ಎಲ್ಲಾ ಆಕ್ಟಿವಿಟಿಯನ್ನು ವೀಕ್ಷಣೆ ಮಾಡಬಹುದು. ಜೊತೆಗೆ ಫೋನ್ ಹ್ಯಾಕ್ ಮಾಡಿ, ಬೇರೆಯವರನ್ನು ವಂಚಿಸಬಹುದಾಗಿದೆ.

ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಸೈಬರ್ ಪೊಲೀಸರು ಪರಿಚಯವಿಲ್ಲದ ಮೂಲಗಳಿಂದ ಬಂದ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ ಸಾರ್ವಜನರಿಗೆ ಸಲಹೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.ಇದನ್ನೂ ಓದಿ: ಬೇಜವಾಬ್ದಾರಿ ಎಪಿಎಂಸಿ ಅಧಿಕಾರಿಗಳ ಅಮಾನತ್ತಿಗೆ ಸಚಿವ ಶಿವಾನಂದ ಪಾಟೀಲ್ ನಿರ್ದೇಶನ

Share This Article