– ಕ್ಷೇತ್ರದ ಮೇಲಿನ ಅಭಿಮಾನ ಹೀಗೆ ಇರಲಿ ಎಂದ ಧರ್ಮಾಧಿಕಾರಿ
ಮಂಗಳೂರು: ಈಗ ಒಂದೊಂದೇ ಸತ್ಯಗಳು ಹೊರಗೆ ಬರುತ್ತಿದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (Veerendra Heggade) ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ (Dharmasthala Case) ಮಾಸ್ಕ್ ಮ್ಯಾನ್ (MaskMan) ಬಂಧನದ ಬಳಿಕ ಮಾತನಾಡಿದ ಅವರು, ಎಸ್‌ಐಟಿ (SIT) ತನಿಖೆ ಹಂತದಲ್ಲಿ ನಾನು ಹೆಚ್ಚು ಮಾತನಾಡಲ್ಲ. ಧರ್ಮಸ್ಥಳಕ್ಕೆ ಬಂದು ಬೆಂಬಲ ಸೂಚಿಸುವ ಎಲ್ಲರಿಗೂ ಧನ್ಯವಾದಗಳು ಎಂದರು. ಇದನ್ನೂ ಓದಿ: ಮಾಸ್ಕ್‌ಮ್ಯಾನ್ ಚಿನ್ನಯ್ಯನ ಅಣ್ಣ ಪೊಲೀಸರ ವಶಕ್ಕೆ
ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ. ಕ್ಷೇತ್ರದ ಮೇಲಿನ ಅಭಿಮಾನ ಹೀಗೇ ಇರಲಿ. ಎಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ ಎಂದು ಭಕ್ತರ ಬಳಿ ತುಳುವಿನಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ: ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ – ಹೆಗ್ಗಡೆ ಮಾತು ಮತ್ತೆ ವೈರಲ್