ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ- ಸಂಚಾರಕ್ಕೆ ಕಂಪ್ಲಿ ಸೇತುವೆ ಮುಕ್ತ

By
1 Min Read

ಬಳ್ಳಾರಿ: ತುಂಗಭದ್ರಾ ಜಲಾಶಯದ (Tungabhadra Dam) ಹೊರ ಹರಿವು ಇಳಿಕೆಯಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಕಂಪ್ಲಿ ಸೇತುವೆಯನ್ನು(Kampli Bridge) ತೆರೆಯಲಾಗಿದೆ.

ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಿದ್ದರಿಂದ ಕಂಪ್ಲಿ ಸೇತುವೆ ಜಲಾವೃತವಾಗಿತ್ತು. ನಿನ್ನೆ ಸಂಜೆಯಿಂದ ನದಿಗೆ ಹೊರಹರಿವು ಕಡಿಮೆ ಮಾಡಿದ್ದರಿಂದ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.ಇದನ್ನೂ ಓದಿ: ಅಪಾಯ‌ಮಟ್ಟ ಮೀರಿದ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಗಳು ಪ್ರವಾಹ ಭೀತಿಯಲ್ಲಿ ಜನ

 

ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆ ಬಳ್ಳಾರಿ-ಗಂಗಾವತಿ (Ballari-Gangavathi) ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮಲೆ‌ನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದ ಕಾರಣ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಇದನ್ನೂ ಓದಿ: ಬೆಂಗಳೂರು | ಗಣೇಶ ಚತುರ್ಥಿಯ ಪ್ರಯುಕ್ತ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್ಸುಗಳ ಸಂಚಾರ

ನಾಲ್ಕು ದಿನಗಳ ಕಾಲ ಕಂಪ್ಲಿ ಸೇತುವೆ ಜಲಾವೃತ ಆಗಿತ್ತು. ನಿನ್ನೆ ಸಂಜೆಯಿಂದ ಹಂತ ಹಂತವಾಗಿ ನದಿ ನೀರಿನ ಮಟ್ಟ ಇಳಿಕೆಯಾಗಿದ್ದರಿಂದ ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸೇತುವೆ ಮೇಲೆ ವಾಹನ ಓಡಾಟಕ್ಕೂ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ.

Share This Article