ಬಿಎಂಟಿಸಿಗೆ ಮತ್ತೊಂದು ಬಲಿ – ಬಸ್ ಹರಿದು 10 ವರ್ಷದ ಬಾಲಕಿ ಸಾವು

By
1 Min Read

ಬೆಂಗಳೂರು: ಬಿಎಂಟಿಸಿ ಬಸ್‌ಗೆ (BMTC bus) ಮತ್ತೊಂದು ಜೀವ ಬಲಿಯಾಗಿದ್ದು, 10 ವರ್ಷದ ಬಾಲಕಿ ಮೇಲೆ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಯಲಹಂಕ (Yalahanka) ಕೋಗಿಲು ಕ್ರಾಸ್ ಬಳಿ ನಡೆದಿದೆ.

ತನ್ವಿ (10) ಮೃತ ಬಾಲಕಿ. ತನ್ವಿ ಮಿಲಿಯನಿಯಂ ಸ್ಕೂಲ್‌ನಲ್ಲಿ 5 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತಾಯಿ ಹರ್ಷಿತಾ ಅವರು ಮಗಳನ್ನು ಸ್ಕೂಲ್‌ಗೆ ಬಿಡಲು ಹೋದಾಗ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಕಾನ್ಸ್‌ಟೇಬಲ್‌ಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದ 6 ಪೊಲೀಸರು ಅರೆಸ್ಟ್‌

ಹರ್ಷಿತಾ ಅವರು ಮಗಳನ್ನು ಹೋಂಡಾ ಆಕ್ಟಿವಾದಲ್ಲಿ ಸ್ಕೂಲ್‌ಗೆ ಬಿಡಲು ತೆರಳಿದ್ದ ವೇಳೆ ಸ್ಕೂಟರ್ ಯಲಹಂಕದ ಕೋಗಿಲು ಮುಖ್ಯ ರಸ್ತೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಸ್ಕಿಡ್ ಆಗಿತ್ತು. ಇದನ್ನೂ ಓದಿ: ದೆಹಲಿಯ 6 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ – 4 ದಿನಗಳಿಂದ 3 ಬಾರಿ ಬೆದರಿಕೆ

ಈ ವೇಳೆ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ತನ್ವಿ ಕೆಳಕ್ಕೆ ಬಿದ್ದು, ಬಸ್‌ನ ಚಕ್ರದಡಿ ಸಿಲುಕಿದ್ದಳು. ಆಕೆಯ ಮೇಲೆಯೇ ಬಿಎಂಟಿಸಿ ಬಸ್‌ನ ಚಕ್ರ ಹರಿದಿದ್ದರಿಂದ ತನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಇದೀಗ ಯಲಹಂಕ ಪೊಲೀಸರು ಬಿಎಂಟಿಸಿ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article