ದರ್ಶನ್ ಸಿನಿ ಜರ್ನಿಗೆ 28 ವರ್ಷ: ‘ಡಿ’ ಫ್ಯಾನ್ಸ್ ಸಂಭ್ರಮ

By
1 Min Read

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟು 28 ವರ್ಷ. ಈ ಜರ್ನಿಯನ್ನ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮ ಪಡುತ್ತಿದ್ದಾರೆ. 1997ರಲ್ಲಿ ಮಹಾಭಾರತ ಸಿನಿಮಾ ಮೂಲಕ ಬಣ್ಣ ಹಚ್ಚಿದ ನಟ ದರ್ಶನ್ ಸುದೀರ್ಘ 28 ವರ್ಷಗಳನ್ನ ಚಿತ್ರರಂಗದಲ್ಲಿ ಪೂರೈಸಿದ್ದಾರೆ. ನಟ ದರ್ಶನ್ ಈ ಜರ್ನಿಯಲ್ಲಿ ಮಾಡಿದ ಭಿನ್ನ ವಿಭಿನ್ನ ಪಾತ್ರಗಳಿಂದ ಅಭಿಮಾನಿಗಳಿಂದ ‘ಡಿ’ ಬಾಸ್ ಎಂದು ಕರೆಸಿಕೊಂಡಿದ್ದಾರೆ.‌

28 ವರ್ಷಗಳಿಂದ ನಿಯತ್ತಿನಿಂದ ಕಟ್ಟಿರುವ ಸ್ವಂತ್ ಬ್ರ್ಯಾಂಡ್ ಇದು. ಯಾರಿಂದಲೂ ಸುಲಭವಾಗಿ ಕೆಡವಲು ಸಾಧ್ಯವಿಲ್ಲ ಎಂದು ಬರೆದುಕೊಂಡು ದರ್ಶನ್ ಅವರ ಅಭಿಮಾನಿಗಳ ಅಧಿಕೃತ ಡಿ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಡೆವಿಲ್ ಸಿನಿಮಾವನ್ನ ಮುಗಿಸಿದ್ದಾರೆ. ಡೆವಿಲ್ ಸಿನಿಮಾದ ಒಂದೊಂದೇ ಅಪ್‌ಡೇಟ್ ನೀಡ್ತಿದ್ದಾರೆ. ಇದೇ ಆ.15 ಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ: ವಿಷ್ಣು ಸರ್‌ ನನ್ನಂಥ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ – ನಟ ಉಪೇಂದ್ರ

ಮತ್ತೊಂದು ಕಡೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಜನ ಆರೋಪಿಗಳಿಗೆ ಸುಪ್ರೀಂ ಸಂಕಷ್ಟ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿರೋದು ದರ್ಶನ್ & ಗ್ಯಾಂಗ್‌ಗೆ ಟೆನ್ಷನ್ ಉಂಟು ಮಾಡಿದೆ. ಬೇಲ್ ಭವಿಷ್ಯ ಏನಾಗಲಿದೆ ಅಂತಾ ದರ್ಶನ್ & ಗ್ಯಾಂಗ್ ಎದುರು ನೋಡುತ್ತಿದೆ.

Share This Article