ಮೆಟ್ರೋ ಕ್ರೆಡಿಟ್‌ ವಾರ್‌ – ಕೇಂದ್ರದ್ದೆಷ್ಟು? ರಾಜ್ಯದ್ದೆಷ್ಟು?

By
2 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಯೆಲ್ಲೋ ಲೈನ್ ಮೆಟ್ರೋ (Namma Metro Yellow Line) ಉದ್ಘಾಟನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ (Congress) ಹಾಗೂ ಬಿಜೆಪಿ (BJP) ನಡುವೆ ಕ್ರೆಡಿಟ್ ವಾರ್‌ ಆರಂಭವಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌, ಮೆಟ್ರೋ ಕಾಮಗಾರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ 50‍% ಅನುದಾನ ನೀಡಬೇಕು. ಆದರೆ ಇದರಲ್ಲಿ ರಾಜ್ಯದ್ದೇ ಹೂಡಿಕೆ ಹೆಚ್ಚಿದೆ. ಕೇಂದ್ರದ್ದು 20% ಇದ್ದರೆ, ರಾಜ್ಯದ್ದು 80% ಕೊಡುಗೆ ಇದೆ ಎಂದಿದ್ದರು. ಇದನ್ನೂ ಓದಿ: ನಮ್ಮ ಮೆಟ್ರೋಗೆ ರಾಜ್ಯದ ಪಾಲೇ ಹೆಚ್ಚು – ಮೋದಿ ಎದುರೇ ಸಿದ್ದರಾಮಯ್ಯ ‘ಕ್ರೆಡಿಟ್‌’ ಕ್ಲೈಮ್

ಅನುದಾನದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಕೇಂದ್ರ 20% ರಾಜ್ಯ 30% ಹಾಗೂ ಬಿಎಂಆರ್‌ಸಿಎಲ್‌ 50% ಅನುದಾನ ಒದಗಿಸಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆ ಪೋಸ್ಟ್‌ನಲ್ಲಿ ಏನಿದೆ?
ಮೆಟ್ರೋ ಯೋಜನೆಯನ್ನು ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ, ಯುಪಿಎ ಸರ್ಕಾರವು ವೆಚ್ಚದ ಹೆಚ್ಚಿನ ಭಾಗವನ್ನು ಭರಿಸಿದ್ದು, ರಾಜ್ಯ ಸರ್ಕಾರದ ಕೊಡುಗೆಯನ್ನು ಮೀರಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಯೋಜನೆಗೆ ಅವರ ಆಧ್ಯತೆ ಕಡಿಮೆಯಾಯಿತು. ಇದರಿಂದ ಕೇಂದ್ರ ಸರ್ಕಾರದ ಪಾಲು ತೀವ್ರ ಕುಸಿತವಾಯಿತು ಎಂದಿದ್ದಾರೆ.

ಕರ್ನಾಟಕ ಸರ್ಕಾರವು ಭೂ ಸ್ವಾಧೀನ ವೆಚ್ಚ ಸೇರಿದಂತೆ ಹೆಚ್ಚಿನ ವೆಚ್ಚವನ್ನು ಭರಿಸಿದೆ. 12,000 ಕೋಟಿ ರೂ.ಗೂ ಹೆಚ್ಚು ಕೊಡುಗೆ ನೀಡಿದೆ. ಕೇಂದ್ರ ಸರ್ಕಾರವು 8,000 ಕೋಟಿ ರೂ. ಹಣ ಒದಗಿಸಿದೆ. ಇದರಿಂದ ಬಿಎಂಆರ್‌ಸಿಎಲ್ ಉಳಿದ ಯೋಜನಾ ವೆಚ್ಚಗಳಿಗೆ ಸಾಲ ಪಡೆಯಬೇಕಾಯಿತು.

ರಾಜ್ಯ ಸರ್ಕಾರದ 30% (12,184 ಕೋಟಿ ರೂ.) ವೆಚ್ಚದಲ್ಲಿ ಭೂ ಸ್ವಾದೀನ ಮತ್ತು ಹೆಚ್ಚುವರಿ ವೆಚ್ಚ ಸೇರಿದೆ. ಯೋಜನೆಗೆ ಬಿಎಂಆರ್‌ಸಿಎಲ್ 20,307 ಕೋಟಿ ರೂ. (50%‌) ವೆಚ್ಚ ಮಾಡಿದ್ದು, ಇದರಲ್ಲಿ ಸಾಲ ಸಹ ಸೇರಿದೆ. ಇನ್ನೂ ಕೇಂದ್ರದಿಂದ 8,122 ಕೋಟಿ ರೂ. (20%) ಅನುದಾನ ನೀಡಿದೆ.

ಕೇಂದ್ರಕ್ಕೆ ಕರ್ನಾಟಕದ ಕೊಡುಗೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಆದರೆ ರಾಜ್ಯಕ್ಕೆ ಬರುವ ಆದಾಯ ಕಡಿಮೆಯಾಗುತ್ತಿದೆ. ಮೆಟ್ರೋ ಹಳದಿ ಮಾರ್ಗ ಯೋಜನೆ ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಕರ್ನಾಟಕವು ಮೋದಿ ಸರ್ಕಾರದಿಂದ ನಿರ್ಲಕ್ಷಿಸಲ್ಪಟ್ಟಿದೆ ಎಂಬುದು ಸತ್ಯ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಯಶಸ್ಸಿನ ಹಿಂದೆ ಬೆಂಗಳೂರಿನ ತಂತ್ರಜ್ಞಾನವಿದೆ: ಮೋದಿ ಅಭಿನಂದನೆ

Share This Article