ಪ್ರಥಮ್ ವಿಚಾರದಲ್ಲಿ ನಾನು ದರ್ಶನ್ ಸರ್ ಪರ ನಿಲ್ತೀನಿ: ಧ್ರುವ ಸರ್ಜಾ

By
1 Min Read

– ವಿಗ್ ಬಗ್ಗೆ ಪ್ರಥಮ್ ಮಾತಾಡೋದು ಸರಿಯಲ್ಲ
– ರಮ್ಯಾ ಮೇಡಂ ಬಗ್ಗೆ ವಲ್ಗರಿ ಆಗಿ ಟ್ರೋಲ್ ಖಂಡಿಸ್ತೀನಿ ಎಂದ ಸರ್ಜಾ

ರ್ಶನ್ (Darshan) ಫ್ಯಾನ್ಸ್ ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಡುವಿನ ಜಗಳ ವಿಚಾರವಾಗಿ ನಟ ಧ್ರುವ ಸರ್ಜಾ (Dhruva Sarja) ಮಾತನಾಡಿದ್ದಾರೆ. ಪ್ರಥಮ್ (Pratham) ವಿಚಾರದಲ್ಲಿ ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಸರ್ಜಾ ಸ್ಪಷ್ಟಪಡಿಸಿದ್ದಾರೆ.

ಪ್ರಥಮ್ ವಿರುದ್ಧ ಕಿಡಿಕಾರಿದ ಧ್ರುವ ಸರ್ಜಾ, ಪ್ರಥಮ್ ವಿಚಾರದಲ್ಲಿ ನಾನು ದರ್ಶನ್ ಸರ್ ಪರ ನಿಲ್ತೀನಿ. ಐ ಸ್ಟ್ಯಾಂಡ್ ವಿತ್ ದರ್ಶನ್ ಸರ್ ಎಂದಿದ್ದಾರೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಜೀವ ಬೆದರಿಕೆ ಕೇಸ್ – ಆರೋಪಿಗಳಾದ ಬೇಕರಿ ರಘು, ಯಶಸ್ವಿನಿಗೆ ಜಾಮೀನು ಮಂಜೂರು

ಚಿಟುಕೆ ಹೊಡೆದು ವಿಗ್ ಬಗ್ಗೆ ಮಾತಾಡೋದು ಸರಿ ಇಲ್ಲ. ಪ್ರಥಮ್ ಮಾತಾಡೋದು ಸರಿ ಇಲ್ಲ. ಅವರಿಗೆ ಯಾರಾದ್ರೂ ಚಾಕು ತೋರಿಸಿದ್ರೆ ದೂರು ಕೊಡಬೇಕು. ಅವರನ್ನ ಬಿಟ್ಟು ದರ್ಶನ್ ಸರ್ ಬಗ್ಗೆ ಮಾತಾಡೋದು ಸರಿಯಲ್ಲ. ಏನು ಪ್ರೂವ್ ಮಾಡೋಕೆ ಹೋಗ್ತಿದ್ದಾರೆ ಗೊತ್ತಾಗ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ದರ್ಶನ್ ಫ್ಯಾನ್ಸ್, ನಟಿ ರಮ್ಯಾಗೆ ಅಶ್ಲೀಲ ಸಂದೇಶ ಪ್ರಕರಣವನ್ನ ನಟ ಧ್ರುವ ಸರ್ಜಾ ಖಂಡಿಸಿದ್ದಾರೆ. ರಮ್ಯಾ ಮೇಡಂ ಬಗ್ಗೆ ವಲ್ಗರ್ ಆಗಿ ಟ್ರೋಲ್ ಖಂಡಿಸ್ತೀನಿ ಎಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.‌ ಇದನ್ನೂ ಓದಿ: ಇತ್ತ `ಡಿ’ ಫ್ಯಾನ್ಸ್ ಜಟಾಪಟಿ – ಅತ್ತ ಕಾಮಾಕ್ಯದಲ್ಲಿ ದರ್ಶನ್

Share This Article