ಡಿ-ಕಂಪನಿಗೆ ಡುಬಾಕ್ ಅಂತ ಕ್ಲಾಸ್ – ದರ್ಶನ್ ಫ್ಯಾನ್ಸ್‌ಗೆ ಬೆಂಡೆತ್ತಿದ ಒಳ್ಳೆ ಹುಡ್ಗ ಪ್ರಥಮ್

By
2 Min Read

ಬೆಂಗಳೂರು: ಡಿ ಕಂಪನಿ ಅದೊಂದು ಡುಬಾಕ್ ಕಂಪನಿ, ದರ್ಬೇಸಿಗಳ ಕಂಪನಿ ಅಂತಾ ಹೆಸರಿಟ್ಕೊಳ್ಳಿ ಎಂದು ದರ್ಶನ್ ಫ್ಯಾನ್ಸ್‌ಗೆ (Darshan Fans) ಒಳ್ಳೆ ಹುಡ್ಗ ಪ್ರಥಮ್ (Olle Hudga Pratham) ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರುವ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ, ಇಂಟರ್‌ಪೋಲ್, ಸೈಬರ್ ಕ್ರೈಮ್, ಇಂಟಲಿಜೆನ್ಸ್ ಇವೆಲ್ಲಾ ದೇಶದ ಬಹಳ ದೊಡ್ಡ ಬೇಹುಗಾರಿಗೆ ಕಂಪನಿಗಳು. ಇವನ್ನೆಲ್ಲಾ ಮುಚ್ಚಿ ಎಲ್ಲಾ ಕೇಸ್‌ಗಳನ್ನು ಆ ಡಿ-ಕಂಪನಿ, ಡುಬಾಕ್ ಕಂಪನಿಗೆ ಕೊಡಿ. ಪರಿಹರಿಸ್ತಾರೆ. ಅವತ್ತು ದೊಡ್ಡಬಳ್ಳಾಪುರದಲ್ಲಿ ನಾನು ರೌಡಿಗಳ ಬಳಿ ಚಿಪ್ಸು-ಪಪ್ಸ್ ತಿನ್ನೋಕೆ ಹೋಗಿದ್ನಂತೆ. ಸುಮ್ನೆ ತಪ್ಪು ಮಾಹಿತಿ ಹಬ್ಬಿಸಬೇಡಿ. ಮೊದಲು ಶಿಕ್ಷಣ ಮುಖ್ಯ. ಸುಮ್ನಿದ್ದು ನಿಮ್ಮ ಅಮ್ಮ-ಅಪ್ಪನಿಗೆ ದುಡಿದು ತಂದು ಸಾಕಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ಸಂಸತ್‌ನಲ್ಲಿ ʻಸಿಂಧೂರʼ ಸಮರ – ವಿಪಕ್ಷಗಳಿಗೆ ಇಂದು ಮೋದಿ ಉತ್ತರ

ಈ ಡುಬಾಕ್ ಕಂಪನಿಯ ಇಂಟಲಿಜೆನ್ಸ್ ಪ್ರಕಾರ ಇನ್ವೇಸ್ಟಿಕೇಷನ್ ಮಾಡಿ ಹೇಳಿದ್ರಂತೆ ಅವತ್ತು ಹಲ್ಲೆ ಮಾಡೋಕೆ ಚಿಪ್ಸು-ಪಪ್ಸು ಮ್ಯಾಟರಂತೆ. ಜೊತೆಗೆ ಅಲ್ಲಿರುವವರು ದರ್ಶನ್ ಫ್ಯಾನ್ಸ್ ಅಲ್ವಂತೆ ಅಂತ ಹೇಳ್ತಿದ್ದಾರೆ. ಸುಮ್ಮನೇ ಡಿ-ಕಂಪನಿ ಅಂತ ಹೆಸರಿಟ್ಕೊಂಡು ಪುಂಡಾಟ ಮಾಡ್ತಾರೆ. ಅಲ್ಲಿ ಏನಾಯ್ತು ಅಂತ ಎಸ್‌ಪಿಯವರು ಹೇಳ್ತಾರೆ. ನಿಮಗೆ ಒಂದು ಚೂರಾದರೂ ಬುದ್ಧಿ ಇದ್ರೆ, ತಪ್ಪು ಮ್ಯಾಟರ್ ಹಬ್ಬಿಸೋದು ಬಿಡಿ. ನಾನು ಅಲ್ಲೇನೂ ಚಿಪ್ಸು ತಿನ್ನಕ್ಕೆ ಹೋಗಿರಲಿಲ್ಲ ಎಂದು ಸೆಲ್ಫಿ ವಿಡಿಯೋ ಮಾಡಿ ಟಾಂಗ್ ಕೊಟ್ಟಿದ್ದಾರೆ.

ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡಿಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದರು. ಆ ಸ್ಥಳದಲ್ಲಿ ಬುಲೆಟ್ ರಕ್ಷಕ್ ಕೂಡ ಇರುವುದಾಗಿ ಹೇಳಿದ್ದರು. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.ಇದನ್ನೂ ಓದಿ: ನಾಗಮಂಡಲ ಎಂದರೇನು? ಇದರ ಆಚರಣೆ, ಮಹತ್ವವೇನು?

Share This Article